ಅಂತರಾಷ್ಟ್ರೀಯ

ಮೇರೆ ಮೀರಿದ ಇಸಿಸ್ ಗಳ ಕ್ರೌರ್ಯ : ನೇತುಹಾಕಿ 4 ಸೈನಿಕರ ಸಜೀವ ದಹನ

Pinterest LinkedIn Tumblr

isis

ಬಾಗ್ದಾದ್, ಸೆ.1: ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಇರಾಕ್‌ನ ನಾಲ್ವರು ಸೈನಿಕರನ್ನು ಜೀವಂತವಾಗಿ ಸುಟ್ಟು ಹಾಕಿರುವ ದೃಶ್ಯಾವಳಿಯ ವಿಡಿಯೊ ಒಂದನ್ನು ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ಐಎಸ್ ಉಗ್ರರಿಬ್ಬರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ನಾಲ್ವರು ಷಿಯಾ ಸೈನಿಕರನ್ನು ಸಜೀವ ದಹಿಸಲಾಗಿದೆ.

ಜೀಹಾದಿ ವೆಬ್‌ಸೈಟ್‌ನಲ್ಲಿ ನಿನ್ನೆ ರಾತ್ರಿ ಬಿಡುಗಡೆ ಮಾಡಲಾಗಿರುವ ವಿಡಿಯೋದಲ್ಲಿ ನಾಲ್ವರು ಯೋಧರನ್ನು ಸರಪಳಿಗಳಿಂದ ಕೈ-ಕಾಲುಗಳನ್ನು ಕಟ್ಟಿ ಕಬ್ಬಿಣದ ತೊಲೆಗೆ ನೇತುಹಾಕಿ ಕೆಳಗಡೆ ಬೆಂಕಿ ಹಚ್ಚಿರುವ ಐಎಸ್ ಉಗ್ರರ ಕ್ರೌರ್ಯದ ಪರಮಾವಧಿಯನ್ನು ಸಾಬೀತುಪಡಿಸಿದೆ.

ಬೆಂಕಿಯಲ್ಲಿ ಸುಟ್ಟು ಹಾಕುವ ಮುನ್ನ ಬಲಿಪಶುಗಳಿಂದಲೇ ಪರಿಚಯ ಹೇಳಿಸಲಾಗಿದೆ. ಕೈ-ಕಾಲುಗಳನ್ನು ಸರಪಳಿಯಿಂದ ಬಂಧಿಸಿರುವ ನಾಲ್ವರು ನಾವು ಹಾಷ್ದ್‌ಶಾಬೀ ಸದಸ್ಯರು ಎಂದು ಹೇಳಿಸಲಾಗಿದೆ. ಸುಮಾರು 8 ನಿಮಿಷಗಳ ಈ ವಿಡಿಯೋದಲ್ಲಿ ಸುನ್ನಿಯೊಬ್ಬ ಬೆಂಕಿ ಹಚ್ಚುತ್ತಿದ್ದು, ನಾಲ್ವರು ಬಂಧಿತರೂ ಅವನನ್ನು ವೀಕ್ಷಿಸುತ್ತಿದ್ದಾರೆ. ಕೊನೆಯಲ್ಲಿ ಸುಟ್ಟ ದೇಹಗಳಿಂದ ಮಾಂಸವನ್ನು ಕತ್ತರಿಸುವ ದೃಶ್ಯವೂ ಇದ್ದು ವೀಡಿಯೋ ಅತ್ಯಂತ ಬೀಭಿತ್ಸಕರವಾಗಿದೆ ಎಂದು ವರದಿ ತಿಳಿಸಿದೆ.

Write A Comment