ರಾಷ್ಟ್ರೀಯ

ಇಲ್ನೋಡಿ! ಅರ್ಧ ನಾರೀಶ್ವರನ ಕಂಡು ಕೈಮುಗಿದ ಜನ

Pinterest LinkedIn Tumblr

naariಪಾಟ್ನಾ : ನಮ್ಮ ಜನಕ್ಕೆ ಏನೆನ್ನಬೇಕೋ ಗೊತ್ತಿಲ್ಲ, ಗಣಪತಿ ಹಾಲು ಕುಡಿಯುತ್ತೆ, ಕಲ್ಲಿನ ಬಸವ ಕಣ್ಣು ಬಿಡುತ್ತೆ ಎಂದರೂ ಸಲೀಸಾಗಿ ನಂಬುತ್ತಾರೆ. ಮಾತ್ರವಲ್ಲ, ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಅಂತಹ ಅಚ್ಚರಿಗಳನ್ನು ಮುಗಿಬಿದ್ದು ನೋಡುತ್ತಾರೆ. ಮಾತ್ರವಲ್ಲ ಸಾಕ್ಷಾತ್ ದೇವರ ಪ್ರತಿರೂಪ ಎಂದುಕೊಂಡು ಭಕ್ತಯಿಂದ ಕೈಮುಗಿಯುತ್ತಾರೆ.

ಬಿಹಾರದಲ್ಲಿ ಏನಾಗಿದೆ ನೀವೇ ಓದಿ. ರಾಜ್ಯದ ನವಾಡಾ ಸಮೀಪದ ಚಿತ್ತಾಪುರ ಎಂಬ ಗ್ರಾಮದಲ್ಲಿ ವಿಭಿನ್ನ ಮಗು ಜನಿಸಿದ್ದು ಇದು ಅರ್ಧನಾರೀಶ್ವರನ ಪ್ರತಿರೂಪವೆಂದು ಭಾವಿಸಿರುವ ಜನ ಸಾಲುಗಟ್ಟಿ ಬಂದು ಮಗುವನ್ನು ನೋಡತೊಡಗಿದ್ದಾರೆ.  ಗಂಡು ಮತ್ತು ಹೆಣ್ಣು ಎರಡು ರೀತಿಯ ಜನನಾಂಗ ಹೊಂದಿರುವ ಈ ಮಗು ಈಗ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇಂತಹ ಮಗು ಜನಿಸಿರುವ  ಈ ಸುದ್ದಿ ಕೇಳಿದ್ದೇ ತಡ ಗ್ರಾಮಸ್ಥರು, ಇದು ಅರ್ಧ ಹೆಣ್ಣು, ಅರ್ಧ ಗಂಡು ರೂಪ ಹೊಂದಿರುವ ಅರ್ಧನಾರೀಶ್ವರನ ಪ್ರತಿರೂಪ ಎಂದು ನಂಬಿ ಪೂಜಿಸಿದ್ದಾರೆನ್ನಲಾಗಿದೆ. ಚಿತ್ತಾಪುರ್ ಗ್ರಾಮದ ಜಾನಿ ದೇವಿ ಎಂಬುವವರು ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿದ್ದಾರೆ. ವಿಚಿತ್ರ ಎಂಬಂತೆ ಅಸಹಜವಾಗಿರುವ ಈ ಮಗುವಿಗೆ ಎರಡು ಜನನಾಂಗಗಳಿವೆ.

ಇಂತಹ ಮಗು ಜನಿಸಿದ್ದಕ್ಕೆ ಪೋಷಕರು ಗಾಬರಿಗೊಳಗಾಗಿದ್ದರು. ಚಿಕಿತ್ಸೆ ಕೊಡಿಸಲು ಪಾಕ್ರಿಬಾರಾನ್ ವಾಹ್ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿನ ವೈದ್ಯರು ಪರೀಕ್ಷಿಸಿ ಸಾದಾರ್ ಆಸ್ಪತ್ರೆಗೆ ಕರೆದೊಯ್ಯುವಂತೆ ಪೋಷಕರಿಗೆ ತಿಳಿಸಿದ್ದಾರೆ. ಅದರಂತೆ ಪೋಷಕರು ಮಗುವನ್ನು ಸಾದಾರ್ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷೆ ನಡೆಸಿದ್ದು, ಶಸ್ತ್ರಚಿಕೆತ್ಸೆ ಮಾಡುವುದು ಕಷ್ಟ ಮತ್ತು ತ್ರಾಸದಾಯಕ ಎಂದು ತಿಳಿಸಿದ್ದಾರೆ. ಈ ನಡುವೆ ಇಂತಹ ಮಗು ಜನಿಸಿರುವ ವಿಷಯ ಕೇಳಿ ಜನ ಆಸ್ಪತ್ರೆಗೆ ನೋಡಲು ಮುಗಿಬಿದ್ದಿದ್ದಾರೆ. ಈ ಮಗು ಸಾಕ್ಷಾತ್ ಶಿವನ ಅರ್ಧನಾರೀಶ್ವರ ಅವತಾರವಾಗಿದೆ ಎಂದು ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

Write A Comment