ನವದೆಹಲಿ: ಮೈಸೂರು ಸೇರಿದಂತೆ ದೇಶದ 50 ನಗರಗಳನ್ನು ಸೋಲಾರ್ ನಗರಗಳಾಗಿ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಲಿದೆ. ಈ ಸಂಬಂಧ ನವ ಮತ್ತು ನವೀಕರಣ ಇಂಧನ ಸಚಿವಾಲಯ ಪಟ್ಟಿ ತಯಾರಿಸಿದೆ.
ಒಟ್ಟಾರೆ 60 ನಗರಗಳ ಪ್ರಸ್ತಾಪ ಈ ಸಚಿವಾಲಯದ ಮುಂದೆ ಹೋಗಿತ್ತು. ಇದರಲ್ಲಿ 50 ನಗರಗಳ ಹೆಸರನ್ನು ಅಂತಿಮಗೊಳಿಸಿದೆ. ಈ ಪಟ್ಟಿಯಲ್ಲಿ ರಾಜ್ಯದಿಂದ ಕೇವಲ ಮೈಸೂರು ಮಾತ್ರ ಆಯ್ಕೆಯಾಗಿದೆ.
ಉಳಿದಂತೆ ದೆಹಲಿ, ಆಗ್ರಾ, ಗಾಂಧಿನಗರ,ರಾಜ್ಕೋಟ್, ಸೂರತ್, ಶಿರಡಿ, ನಾಗ್ಪುರ, ಔರಂಗಾಬಾದ್, ಇಂಫಾಲ್, ಚಂಡೀಗಡ, ಗುರ್ಗಾವ್, ಪಣಜಿ ಸೇರಿದಂತೆ ಒಟ್ಟು 50 ನಗರಗಳಿವೆ. ಈ ನಗರಗಳಲ್ಲಿ ಒಟ್ಟು 8 ಅನ್ನು ಮಾದರಿ ಸೋಲಾರ್ ಸಿಟಿಗಳಾಗಿ ಕೇಂದ್ರ ಸರ್ಕಾರ ಅಭಿವೃದ್ಧಿ ಮಾಡಲಿದೆ. ಅಂದರೆ ನಾಗ್ಪುರ,ಚಂಡೀಗಡ, ಗಾಂಧಿನಗರ ಮತ್ತುಮೈಸೂರು ನಗರಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ.