ಭುವನೇಶ್ವರ :ಇದೇನಪ್ಪಾ ಓಡಿಸ್ಸಾ ಕಾಮುಕರ ರಾಜ್ಯವಾಗಿದೆ ಎಂದು ದಿಗಿಲಾಯಿತೇ? ಆಶ್ವರ್ಯ ಆದರೂ ನಿಜ! ಹೌದು, ಓಡಿಸ್ಸಾ ಮೊದಲಿನಂತಿಲ್ಲ, ಅತ್ಯಾಚಾರ ಪ್ರಕರಣ ವಿಪರೀತ ಹೆಚ್ಚಾಗಿವೆ. ಅದು ಕಡಿಮೆಯೇನಲ್ಲ, ಬರೋಬ್ಬರಿ 245 ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿವೆ.
ಓಡಿಸ್ಸಾದಲ್ಲಿ 245 ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿರುವುದು ಕಟ್ಟುಕತೆಯೇನಲ್ಲ, ಸ್ವತಃ ಓಡಿಸ್ಸಾ ಮುಖ್ಯಂತ್ರಿಗಳೇ ಅಧಿಕೃತವಾಗಿ ನೀಡಿರುವ ಆಘಾತಕಾರಿ ಮಾಹಿತಿ ಇದು. ಅಸೆಂಬ್ಲಿಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಈ ಮಾಹಿತಿ ನೀಡಿದ್ದು, ಕಳೆದ ಮೂರು ವರ್ಷಗಳಲ್ಲಿ 245 ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿವೆ. ಇದರಲ್ಲಿ 8 ಪ್ರಕರಣದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸದನದಲ್ಲಿ ಕಾಂಗ್ರೆಸ್ ಶಾಸಕ ಪ್ರಕಾಶ್ ಚಂದ್ರ ಬೆಹೆರಾ ಅವರು ಕೇಳಿದ ಲಿಖಿತ ಪ್ರಶ್ನೆಗೆ ಸಿಎಂ ನವೀನ್ ಪಟ್ನಾಯಕ್ ಈ ಉತ್ತರ ನೀಡಿದ್ದಾರೆ. 2012 ರಲ್ಲಿ 67, 2013 ರಲ್ಲಿ 87 ಹಾಗೂ 2014ರಲ್ಲಿ 91 ಅತ್ಯಾಚಾರ ಪ್ರಕರಣ ನಡೆದಿವೆ ಎಂದು ಸಿಎಂ ಲಿಖಿತ ಉತ್ತರ ನೀಡಿದ್ದಾರೆ.
2013ರಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಐವರು ಕೊಲೆಯಾಗಿದ್ದರೆ, 2014ರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸಂತ್ರಸ್ಥರಿಗೆ ಪರಿಹಾರ ನೀಡುವ ಕುರಿತು ಕ್ರಮಕೈಗೊಂಡಿದ್ದು, ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ. ಶೀಘ್ರವೇ ಪರಿಹಾರ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.