ಮನೋರಂಜನೆ

‘ರುದ್ರಮದೇವಿ’ ಬಿಡುಗಡೆ ಮುಂದಕ್ಕೆ?

Pinterest LinkedIn Tumblr

rudramadeviಚೆನ್ನೈ: ನಿರ್ದೇಶಕ ಗುಣಶೇಖರ್ ಅವರ ಬಹುನಿರೀಕ್ಷಿತ ತೆಲುಗು ಐತಿಹಾಸಿಕ ಸಿನೆಮಾ ‘ರುದ್ರಮದೇವಿ’ ಈ ಹಿಂದೆ ನಿಗದಿಯಾಂದಂತೆ ಸೆಪ್ಟಂಬರ್ ೪ ರಂದು ಬಿಡುಗಡೆಯಾಗಬೇಕಿತ್ತು ಆದರೆ ಚಿತ್ರೀಕರಣ ನಂತರದ ಕೆಲಸಗಳು ಬಾಕಿ ಉಳಿದಿರುವುದರಿಂದ ಬಿಡುಗಡೆ ಮುಂದೆಹಾಕಲಾಗಿದೆ ಎಂದು ತಿಳಿದುಬಂದಿದೆ.

“ಕಳೆದ ಕೆಲವು ತಿಂಗಳುಗಳಿಂದ ವಿಶುಯಲ್ ಎಫೆಕ್ಟ್ಸ್ ಮೇಲೆ ತಂಡ ಕೆಲಸ ಮಾಡುತ್ತಿದೆ. ಇನ್ನೂ ಎರಡು ವಾರಗಳ ಕೆಲಸ ಉಳಿದಿದ್ದು ಸಿನೆಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಇದಿನ್ನೂ ಅಧಿಕೃತವಾಗಿಲ್ಲ” ಎಂದು ಸಿನೆಮಾದ ಮೂಲಗಳು ತಿಳಿಸಿವೆ.

ಈಗ ಬಹುಶಃ ಸಿನೆಮಾ ಸೆಪ್ಟಂಬರ್ ಮೂರನೇ ವಾರದಲ್ಲಿ ತೆರೆಕಾಣುವ ಸಾಧ್ಯತೆ ಇದೆ ಎಂದು ಅದೇ ಮೂಲಗಳಿಂದ ತಿಳಿದುಬಂದಿದೆ.

ಅನುಷ್ಕಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಈ ಸಿನೆಮಾ ಕಾಕತೀಯ ರಾಜವಂಶದ ರಾಣಿಯ ಪಾತ್ರ ನಿರ್ವಹಿಸಿದ್ದಾರೆ.

ರಾಣ ದಗ್ಗುಬಟಿ, ಅಲ್ಲೂ ಅರ್ಜುನ್, ನಿತ್ಯಾ ಮೆನನ್, ಪ್ರಕಾಶ್ ರಾಜ್ ಮುಂತಾದವರು ಕೂಡ ತಾರಾಗಣದಲ್ಲಿದ್ದು, ಈ ಸಿನೆಮಾ ಕನ್ನಡದಲ್ಲೂ ಡಬ್ ಆಗಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ವದಂತಿ ದಟ್ಟವಾಗಿದೆ.

Write A Comment