ಅದೊಂದು ಅಪರೂಪದ ಗಳಿಗೆ. ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿ ಹುಟ್ಟುಹಬ್ಬದ ಸಂದರ್ಭದಲ್ಲಿ ಇನ್ನಿಬ್ಬರು ದೊಡ್ಡ ನಟರ ಸಮಾಗಮ. ನಟ, ಸಚಿವ ಅಂಬರೀಷ್, ನಟ ರಜನಿಕಾಂತ್ ಮತ್ತು ನಟ, ರಾಜಕಾರಣಿ ಚಿರಂಜೀವಿ ಒಟ್ಟಿಗೆ ಕಾಣಿಸಿಕೊಂಡಿದ್ದು ಹೀಗೆ.
ಚಿರಂಜೀವಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಸುಮಲತಾ ಮತ್ತು ಅಂಬರೀಷ್ ದಂಪತಿ ಹೋಗಿದ್ದಾಗ ತೆಗೆದ ಫೋಟೋವನ್ನು ಸುಮಲತಾ ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಹುಟ್ಟುಹಬ್ಬದ ಸಮಾರಂಭಕ್ಕೆ ಬಂದಿದ್ದ ನಟ ರಜನಿಕಾಂತ್ ಕೂಡಾ ಅವರೊಂದಿಗೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಆತ್ಮೀಯ ಸ್ನೇಹಿತ ಚಿರಂಜೀವಿ ಬಗ್ಗೆ ಸುಮಲತಾ ಹೀಗೆ ಬರೆದುಕೊಂಡಿದ್ದಾರೆ. ‘ಚಿರಂಜೀವಿ.. ಯಾವತ್ತಿಗೂ ಸ್ನೇಹಿತ..60 ವರ್ಷಗಳ ವಿಜಯಗಾಥೆ.. ಎಂದೆಂದಿಗೂ ಪ್ರೀತಿ ಮತ್ತು ಸಂತಸದ ನಡುವೆ ಬಾಳಿ’ ಎಂದು ಹಾರೈಸಿದ್ದಾರೆ.
