ಕುಂದಾಪುರ: ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿ ಗಂಗೊಳ್ಳಿಯ ವಿಘ್ನೇಶ್ ಖಾರ್ವಿ(20) ರವಿವಾರ ಸಂಜೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಗಂಗೊಳ್ಳಿಯ ಗೋಪಾಲ ಖಾರ್ವಿ ಮತ್ತು ಶಾಂತಿ ಖಾರ್ವಿ ದಂಪತಿಗಳ ಏಕೈಕ ಪುತ್ರ ಎಂದು ತಿಳಿದುಬಂದಿದೆ.
ಕೋಟೇಶ್ವರ ಕಾಲೇಜಿನ ತ್ರತೀಯ ಬಿಕಾಂ ವಿದ್ಯಾರ್ಥಿಯಾದ ವಿಘ್ನೇಶ್ ಖಾರ್ವಿ ಇತ್ತೀಚೆಗೆ ವೈಯಕ್ತಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಆ ವಿಷಯವನ್ನು ತಂದೆ ತಾಯಿಗೂ ತಿಳಿಸದೇ, ಸ್ನೇಹಿತರಲ್ಲೂ ತಿಳಿಸದೇ ಅದರಿಂದ ಮನನೊಂದು ಕೊಂಡಿದ್ದ. ಅಂತೆಯೇ ಭಾನುವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಘ್ನೇಶ್ ಮರಕ್ಕೆ ನೇಣು ಹಾಕಿಕೊಂಡ ತಕ್ಷಣ ಸ್ಥಳೀಯರು ಕಂಡು ಕೂಡಲೇ ಕುಂದಾಪುರದ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನವನ್ನು ಮಾಡಿದರೂ ಕೂಡ ಮಾರ್ಗಮಧ್ಯೆ ವಿಘ್ನೇಶ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಈತ ಶಾಂತಿ ಖಾರ್ವಿ ಅವರ ಒಬ್ಬನೇ ಮಗನಾಗಿದ್ದು ಈತನ ಅಗಲುವಿಕೆಯಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.