ರಾಷ್ಟ್ರೀಯ

ಪತ್ನಿಯನ್ನು ಕೊಂದ ಪತಿ ಮಹಾಶಯ ಗುರುತು ಪತ್ತೆಯಾಗದಂತೆ ಆ್ಯಸಿಡ್ ಹಾಕಿದ !

Pinterest LinkedIn Tumblr

muslim-acid-attack-09acid

ಭಡೋಹಿ: ಪತ್ನಿಯನ್ನು ಕೊಂದ ಪತಿ ಮಹಾಶಯನೊಬ್ಬ, ಗುರುತು ಪತ್ತೆಯಾಗಬಾರದೆಂದು ಮುಖಕ್ಕೆ ಆ್ಯಸಿಡ್ ಎರಚಿದ ಘಟನೆ ಉತ್ತರ ಪ್ರದೇಶದ ಗೋಪಿಗಂಜ್ ಪ್ರದೇಶದಲ್ಲಿ ನಡೆದಿದೆ.

‘ವಿಕ್ರಮ್ ಕೋಲ್ (35) ಮೂರು ವರ್ಷಗಳ ಹಿಂದೆ ಪೂಜಾ ಕೋಲ್ ಎಂಬುವವರನ್ನು ಮದುವೆಯಾಗಿದ್ದು, ಅವರು ಕಾರ್ಯನಿರ್ವಹಿಸುತ್ತಿದ್ದ ರಘುನಾಥಪುರದ ಫ್ಯಾಕ್ಟರಿ ಸಮೀಪ ಬಾಡಿಗೆ ಕೊಠಡಿಯೊಂದರಲ್ಲಿ ವಾಸವಿದ್ದರು. ಶನಿವಾರ ಸಂಜೆ ಪೂಜಾ ಕತ್ತು ಹಿಸುಕಿ ಕೊಂದ ವಿಕ್ರಮ್, ಆಕೆ ಮೈ ಮೇಲೆ ಆ್ಯಸಿಡ್ ಸುರಿದು, ಬೀಗ ಹಾಕಿ ಪರಾರಿಯಾಗಿದ್ದಾನೆ,’ ಎಂದು ಪೊಲೀಸ್ ಅಧಿಕಾರಿ ಎಸ್.ಎಸ್.ರೈ ಹೇಳಿದ್ದಾರೆ.

ದುರ್ವಾಸನೆ ಬಂದಿದ್ದರಿಂದ, ಕೊಡಠಿಯ ಒಡತಿ ರಾಧ ದೇವಿ ಈ ಬಗ್ಗೆ ಪೊಲೀಸರಿಗೆ ಸೋಮವಾರ ಬೆಳಗ್ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರ ಕೊಠಡಿಯಿಂದ ಮದುವೆಯಾದ ದಾಖಲೆಗಳು ಹಾಗೂ ಫೋಟೋಗಳನ್ನು ವಶಪಡಿಸಿಕೊಂಡಿದ್ದಾರೆ.

ತಲೆಮರೆಸಿಕೊಂಡಿರುವ ವಿಕ್ರಂ ಪತ್ತೆಯಾಗಿ ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ.

Write A Comment