ನವದೆಹಲಿ, ಆ. 10: ಮೊಬೈಲ್ ಕಸಿಯಲು ಪ್ರಯತ್ನಿಸಿದ ಕಳ್ಳನಿಗೆ ಯುವತಿಯೊಬ್ಬಳು ತಕ್ಕ ಪಾಠ ಕಲಿಸುವ ಮೂಲಕ ಸಾಹಸ ಮೆರೆದಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. 19 ವರ್ಷ ವಯಸ್ಸಿನ ಕೃತಿಕಾ ಎಂಬಾಕೆ ಮಕ್ಕಳಿಗೆ ಪಾಠ ಹೇಳಿ ಮನೆಗೆ ವಾಪಾಸ್ಸಾಗುತ್ತಿದ್ದರು. ಮೊಬೈಲ್‌ನಲ್ಲಿ ಮಾತನಾಡುತ್ತಾ ಹೊರಟಿದ್ದ ಕೃತಿಕಾ ಸಮೀಪ ಬೈಕ್‌ನಲ್ಲಿ ಬಂದ ಕಳ್ಳ ಮೊಬೈಲ್ ಕದಿಯಲು ಯತ್ನಿಸಿದ್ದಾನೆ.
ಕೂಡಲೇ ಎಚ್ಚೆತ್ತುಕೊಂಡ ಕೃತಿಕಾ ಮೊಬೈಲ್ ಅನ್ನು ಗಟ್ಟಿಯಾಗಿ ಹಿಡಿದಿದ್ದಾಳೆ. ಅಷ್ಟೇ ಅಲ್ಲದೇ, ಕಳ್ಳನ ಕಾಲರ್ ಹಿಡಿದು ನೆಲಕ್ಕೆ ಕೆಡವಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ.
ಈಕೆಯ ತಾಯಿ ಮನೆಯ ಬಾಲ್ಕನಿ ಮೇಲೆ ನಿಂತು ನೋಡಿ ಸಹಾಯಕ್ಕಾಗಿ ಕೂಗಿದ್ದಾರೆ. ಕೂಡಲೇ ಅಕ್ಕ-ಪಕ್ಕದವರು ಧಾವಿಸಿ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತನನ್ನು ಪವಾನ್‌ಗಿರಿಯೆಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಕೃತಿಕಾ ದೆಹಲಿ ಪೊಲೀಸರು ನೀಡಿದ ಆತ್ಮರಕ್ಷಣೆಯ ತರಬೇತಿ ಪಡೆದಿದ್ದಳು.
ಯುವತಿಯ ಸಾಹಸ, ಧೈರ್ಯ ಮೆಚ್ಚಿದ ಡಿಸಿಪಿ ಪಱ್ಮಾದಿತ್ಯ ಆಕೆಗೆ ಪ್ರಶಸ್ತಿ ನೀಡಲು ನಿರ್ಧರಿಸಿರುವುದಾಗಿ ಪ್ರಕಟಿಸಿದ್ದಾರೆ.