ಮುಂಬೈ

ಪೆನ್ನು ಹಿಡಿವ ಕೈಯಲ್ಲಿ ಗನ್ನು ಹಿಡಿಯಲು ಹೊರಟು ಜೈಲು ಪಾಲಾದ !

Pinterest LinkedIn Tumblr

gunಇಸಿಸ್ ಉಗ್ರ ಸಂಘಟನೆ ಸೇರಲು ಹೊರಟಿದ್ದ ಪತ್ರಕರ್ತ ಮಹಾಶಯನೊಬ್ಬ ದೆಹಲಿ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.

ಮುಂಬೈ ಮೂಲದ ಜುಬೇರ್ ಅಹ್ಮದ್ ಖಾನ್  ಎಂಬ ೫೦ ವರ್ಷದ ವ್ಯಕ್ತಿಯೊಬ್ಬ  ತನ್ನ ಫೇಸ್​ಬುಕ್​ನಲ್ಲಿ ತಾನು ಭಾರತೀಯ ಪೌರತ್ವವನ್ನು ಬಿಟ್ಟು ಇಸಿಸ್ ಉಗ್ರರ ಅಧಿಕೃತ ವಕ್ತಾರನಾಗಲು ಬಯಸಿರುವುದಾಗಿ ಸ್ಟೇಟಸ್ ಹಾಕಿಕೊಂಡಿದ್ದ. ಅಷ್ಟೇ ಅಲ್ಲ, ಇದೇ ಕಾರಣಕ್ಕೆ ಇರಾಕ್ ರಾಯಭಾರ ಕಚೇರಿಂದ ಉದ್ಯೋಗ ವೀಸಾ ಪಡೆಯುವ ಸಲುವಾಗಿ ಶುಕ್ರವಾರ ಇರಾಕ್ ರಾಯಭಾರ ಕಚೇರಿಗೆ ಆಗಮಿಸಿದ್ದ. ಈ ಸಮಯದಲ್ಲಿ ಆತನ ವರ್ತನೆಯಿಂದ ಅನುಮಾನಗೊಂಡ ರಾಯಭಾರ ಕಚೇರಿ ಸಿಬ್ಬಂದಿ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರ ವಿಚಾರಣೆಯ ಸಮಯದಲ್ಲಿ ತಾನು ಪತ್ರಕರ್ತನೆಂದು ಹೇಳಿಕೊಂಡಿದ್ದ ಈತನ ಫೇಸ್​ಬುಕ್ ನಲ್ಲಿ ಮುಂಬೈನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದು, 2007ರಲ್ಲಿ ವಜಾಗೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ವಕ್ತಾರನಾಗಿ ಬಯಸಿ ಈತ ಇಸಿಸ್ ಉಗ್ರರ ನಾಯಕ ಅಬು ಬಾಕರ್ ಅಲ್ ಬಗ್ದಾದಿಗೆ ಕಳುಹಿಸಿದ್ದ ಫೇಸ್​ಬುಕ್ ಸಂದೇಶ ಮತ್ತು 1993ರ ಮುಂಬೈ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಇತ್ತೀಚೆಗೆ ಗಲ್ಲು ಶಿಕ್ಷೆಗೆ ಒಳಗಾದ ಯಾಕುಬ್ ಮೆಮನ್ ಹುತ್ಮಾತನಾಗಿದ್ದಾಗಿ ಈತ ಬರೆದುಕೊಂಡಿದ್ದ ವಿವರಗಳು ಪತ್ತೆಯಾಗಿದ್ದು ತನಿಖೆ ಮುಂದುವರೆದಿದೆ.

Write A Comment