ಮುಂಬೈ

ಪಾನಮತ್ತ ವಾಹನ ಚಾಲನೆ: ವಕೀಲೆ ಜಾಹ್ನವಿಗೆ ಜಾಮೀನು

Pinterest LinkedIn Tumblr

jaಮುಂಬೈ: ಪಾನಮತ್ತರಾಗಿ ವಾಹನ ಚಾಲನೆ ಮಾಡಿ, ಇಬ್ಬರ ಸಾವಿಗೆ ಕಾರಣವಾದ ವಕೀಲೆ ಜಾಹ್ನವಿ ಗಡ್ಕರ್ ಅವರಿಗೆ 58 ದಿನಗಳ ಕಾಲ ಜೈಲು ವಾಸದ ನಂತರ ಜಾಮೀನು ಸಿಕ್ಕಿದೆ.

ವಾದಿ, ಪ್ರತಿವಾದಿಗಳ ವಾದ, ವಿವಾದವನ್ನು ಆಲಿಸಿದ ಇಲ್ಲಿನ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಸಂಜಯ್ ವಿ ಪಾಟೀಲ್, ಜಾಮೀನು ಆದೇಶವನ್ನು ಬುಧವಾರ ನೀಡಲಿದ್ದಾರೆ.

‘ಆರೋಪಿಗೆ ಜಾಮೀನು ನೀಡಿದರೆ, ತಪ್ಪಿಸಿಕೊಳ್ಳಬಹುದು. ಇಬ್ಬರ ಸಾವಿಗೆ, ನಾಲ್ವರು ಗಂಭೀರವಾಗಿ ಗಾಯಗೊಳ್ಳಲು ಕಾರಣವಾಗಿದ್ದ ಆರೋಪಿಗೆ ಜಾಮೀನು ನೀಡಿದರೆ, ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಬಹುದು,’ ಎಂದು ಸರಕಾರಿ ವಕೀಲರು ವಾದಿಸಿದ್ದರು.

‘ಸರಕಾರಿ ವಕೀಲರು ಪದೆ ಪದೇ ‘ಆರೋಪಿ ಸುಶಿಕ್ಷಿತರು,’ ಎಂದು ಹೇಳುತ್ತಿದ್ದಾರೆ. ಸುಶಿಕ್ಷತರಾದ ಮಾತ್ರಕ್ಕೆ ಜಾಮೀನು ನೀಡಬಾರದಾ? ಹಿಂದುಳಿದ ಕುಟುಂಬದಿಂದ ಬಂದ ಆರೋಪಿ ಜೀವನದಲ್ಲಿ ಮಹತ್ತರವಾದದ್ದನ್ನು ಸಾಧಿಸಿದ್ದಾರೆ. ಪದೆ ಪದೇ ‘ಪತಿಯಿಂದ ಬೇರ್ಪಟ್ಟು, ಪ್ರತ್ಯೇಕವಾಗಿರುವ ಆರೋಪಿ,’ ಎಂದೂ ಹೇಳಲಾಗುತ್ತಿದೆ, ಇದಕ್ಕೂ ಜಾಮೀನು ನಿರಾಕರಣೆಗೂ ಏನು ಸಂಬಂಧ?’ ಎಂದು ಪ್ರತಿವಾದಿಸಿದ್ದರು.

Write A Comment