ಕರ್ನಾಟಕ

‘ದೆವ್ವ’ಕ್ಕೆ ಗುದ್ದಿದ ಕಾರು ! ಗಂಭೀರವಾಗಿ ಗಾಯಗೊಂಡ ದೆವ್ವ….ಏನಿದು ಘಟನೆ…ಈ ವೀಡಿಯೋ ನೋಡಿ..

Pinterest LinkedIn Tumblr

ghost

ರಸ್ತೆ ಬದಿಯಲ್ಲಿ ದೆವ್ವದ ವೇಷ ಹಾಕಿ ವಾಹನ ಚಾಲಕರಿಗೆ ಹೆದರಿಸುವ ಆಟ ಆಡುತ್ತಿದ್ದ ತಂಡ, ಕಾರೊಂದರ ಚಾಲಕನಿಗೆ ಹೆದರಿಸಲು ಹೋಗಿ ಆತ ನಿಜ ದೆವ್ವವೆಂದು ಭಾವಿಸಿ ಢಿಕ್ಕಿ ಹೊಡೆದ ಪರಿಣಾಮ ‘ದೆವ್ವ’ ಗಂಭೀರವಾಗಿ ಗಾಯಗೊಂಡಿರುವ ವೀಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಮುಂದೆ ನೋಡಿದರೆ ದೆವ್ವ, ಹಿಂದೆ ನೋಡಿದರೆ ದೆವ್ವ. ಈ ಸಮಯದಲ್ಲಿ ಏನು ಮಾಡಬೇಕು ಎಂದು ತೋಚದ ಕಾರು ಡ್ರೈವರ್ ನೇರವಾಗಿ ಮುಂದುಗಡೆ ಇದ್ದ ದೆವ್ವಕ್ಕೆ ಗುದ್ದಿದ್ದಾನೆ. ಪರಿಣಾಮ ದೆವ್ವದ ಸ್ಥಿತಿ ಗಂಭೀರ.

ಗುಂಪೊಂದು ದೆವ್ವದ ಆಟ ಆಡಿ ಚಾಲಕರನ್ನು ಹೆದರಿಸುತ್ತಿತ್ತು. ಹೀಗಾಗಿ 2 ಜನ ದೆವ್ವದ ವೇಷ ಹಾಕಿ ಕಾರಿನ ಚಾಲಕರನ್ನು ಹೆದರಿಸುತ್ತಿದ್ದರು. ಈ ಮಧ್ಯೆ ಒಂದು ಕಾರು ರಸ್ತೆಯಲ್ಲಿ ಚಲಿಸುತ್ತಿದ್ದಾಗ ಮುಂದುಗಡೆಯಿಂದ ದೆವ್ವ ಪ್ರತ್ಯಕ್ಷವಾಗಿದೆ. ಚಾಲಕ ಕೂಡಲೇ ಕಾರನ್ನು ಹಿಂದಕ್ಕೆ ತೆಗೆದಾಗ ಹಿಂದೆ ಇನ್ನೊಬ್ಬ ದೆವ್ವದ ವೇಷಧಾರಿ ಪ್ರತ್ಯಕ್ಷವಾಗಿ ಹೆದರಿಸಿದ್ದಾನೆ. ಹಿಂದೆಯೂ ದೆವ್ವ ಮುಂದೆಯೂ ದೆವ್ವವನ್ನು ನೋಡಿದ ಚಾಲಕ ಧೈರ್ಯ ತೆಗೆದುಕೊಂಡು ಕಾರನ್ನು ಮುಂದಕ್ಕೆ ಚಲಾಯಿಸಿದ್ದಾನೆ. ಪರಿಣಾಮ ಮುಂದಿದ್ದ ದೆವ್ವದ ವೇಷಧಾರಿಗೆ ಕಾರು ಗುದ್ದಿದೆ.

ಕಾರು ಗುದ್ದಿದ ರಭಸಕ್ಕೆ ದೆವ್ವದ ವೇಷಧಾರಿ ರಸ್ತೆಯ ಮೇಲೆ ಬಿದ್ದಿದ್ದಾನೆ. ಕೂಡಲೇ ಈತನ ರಕ್ಷಣೆಗೆ ವಿಡಿಯೋ ಶೂಟ್ ಮಾಡುತ್ತಿದ್ದ ಸ್ನೇಹಿತ ಆಗಮಿಸಿ ಕಾಪಾಡಿದ್ದಾನೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆದರೆ ಜುಲೈ 30ರಂದು ವಿಡಿಯೋ ಅಪ್ಲೋಡ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

https://youtu.be/TWtH-PWlXvs

Write A Comment