ಉಡುಪಿ : ವಿನಾಶದ ಅಂಚಿನಲ್ಲಿರುವ ಗೋವುಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಉಡುಪಿಯಲ್ಲಿ ಅ. 4ರಿಂದ 7ರ ವರೆಗೆ ಬೃಹತ್ ಗೋ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ.
(ಸಾಂದರ್ಭಿಕ ಚಿತ್ರ)
ಸಮ್ಮೇಳನದ ಪೂರ್ವಭಾವಿಯಾಗಿ ಜರಗಿದ ಸಭೆಯಲ್ಲಿ ಮಾತನಾಡಿದ ಪರ್ಯಾಯ ಶ್ರೀ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು “ಪರ್ಯಾಯ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಲು ಉತ್ಪಾದಕರ ಒಕ್ಕೂಟ ಹಾಗೂ ಇತರ ಹಲವು ಸಂಘಟನೆಗಳ ಸಹಭಾಗಿತ್ವದಲ್ಲಿ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ.
ಗೋವುಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಸಮ್ಮೇಳನದಲ್ಲಿ “ಗೋ ಆಧಾರಿತ ಕೃಷಿ, ಗೋಆಧಾರಿತ ವಾಣಿಜ್ಯ, ಗೋ ಆಧಾರಿತ ಚಿಕಿತ್ಸೆ, ಗೋ ಆಧಾರಿತ ಜೀವನ’ ವಿಷಯದ ಕುರಿತು ದೇಶದ ಪ್ರಮುಖ ಕೃಷಿ ತಜ್ಞರು, ವಿಜ್ಞಾನಿಗಳು, ಸಾಧಕರು, ಚಿಂತಕರು, ಮಠಾಧೀಶರು ವಿಚಾರ ಮಂಡಿಸಲಿದ್ದಾರೆ. ಗೋ ಜಾಗೃತಿ ಯುವ ಸಮಾವೇಶ ಕೂಡ ನಡೆಯಲಿದೆ ಎಂದು ತಿಳಿಸಿದರು.