ಮನೋರಂಜನೆ

ಫ್ಯಾಷನ್ ಬೆಡಗಿ ಸೋನಮ್ ಗೆ ಕಾಡ್ತಿರೋ ಚಿಂತೆ ಏನು?

Pinterest LinkedIn Tumblr

1864Sonam_Kapoor_Wallpaper_ctcvy-1ತಮ್ಮ ಸ್ಟೈಲ್, ಫ್ಯಾಷನ್ ನಿಂದಲೇ ಹೆಸರು ಮಾಡಿದ ಬಾಲಿವುಡ್ ಬೆಡಗಿ ಸೋನಮ್ ಕಪೂರ್. ತನ್ನ ಸೌಂದರ್ಯದಿಂದಲೇ ಅಭಿಮಾನಿಗಳ ಮನ ಗೆದ್ದಿರುವ ಸೋನಮ್ ಗೂ ಒಂದು ಚಿಂತೆ ಕಾಡ್ತಾ ಇದೆ.

ವರ್ಷ 29 ಆಯ್ತು. ಸೋನಮ್ ಏನಾದ್ರೂ ಮದುವೆ ಬಗ್ಗೆ ಚಿಂತಿಸ್ತಾ ಇದ್ದಾಳಾ ಅಂತಾ ನೀವು ಬೇಸರ ಮಾಡಿಕೊಳ್ಳಬೇಡಿ. ಸೋನಮ್ ಗೆ ಚಿಂತೆಯಾಗಿರೋದು ಆಕೆಯ ಶಿಕ್ಷಣದ ಬಗ್ಗೆ. ಹೌದು ಸೋನಮ್ ಓದಿದ್ದು ಪಿಯುಸಿ ತನಕ ಮಾತ್ರ. ನಂತರ ಬಾಲಿವುಡ್ ಗೆ ಪದಾರ್ಪಣೆ ಮಾಡಿದ ಬೆಡಗಿಗೆ ಓದಲು ಸಾಧ್ಯವಾಗಲಿಲ್ಲ.

ಪದವಿ ಪೂರ್ಣಗೊಳಿಸಲಿಲ್ಲ ಎಂದು ಕೊರಗುತ್ತಿರುವ ಸೋನಮ್ ಈ ವರ್ಷ ಪದವಿ ಪಡೆಯುವ ವಿಶ್ವಾಸದಲ್ಲಿದ್ದಾಳೆ. ಸಾಹಿತ್ಯದಲ್ಲಿ ಪದವಿ ಪಡೆಯಲು ಅರ್ಜಿ ಸಲ್ಲಿಸುವುದಾಗಿ ಹೇಳಿರುವ ಸೋನಮ್, ಪಿಯುಸಿ ನಂತರ ಪದವಿ ಮುಗಿಸಿಯೇ ಬಾಲಿವುಡ್ ಗೆ ಬರಬೇಕಿತ್ತು ಎನ್ನುತ್ತಿದ್ದಾಳೆ.

Write A Comment