ಕರ್ನಾಟಕ

ಪ್ರೇಯಸಿ ಕರೆ ಸ್ವೀಕರಿಸದ್ದಕ್ಕೆ ಮನನೊಂದು ನೇಣಿಗೆ ಶರಣಾದ ಯುವಕ

Pinterest LinkedIn Tumblr

2266hang-upಶಿವಮೊಗ್ಗ: ಪ್ರೇಯಸಿ ತನ್ನ ಕರೆ ಸ್ವೀಕರಿಸಲಿಲ್ಲವೆಂಬ ಕ್ಲುಲ್ಲಕ ಕಾರಣಕ್ಕೆ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ವಿನೋಬ ನಗರ ನಿವಾಸಿ 23 ವರ್ಷದ ಹರೀಶ್ ನೇಣಿಗೆ ಶರಣಾದ ಯುವಕನಾಗಿದ್ದು, ಈತ ಹೆಡ್ ಕಾನ್ಸ್ಟೇಬಲ್ ಸೋಮಣ್ಣ ಎಂಬವರ ಪುತ್ರನೆಂದು ತಿಳಿದುಬಂದಿದೆ.

ಕಳೆದ ಐದು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಹರೀಶ್ ಆ ಯುವತಿಗೆ ಕರೆ ಮಾಡಿದ ವೇಳೆ ಆಕೆ ಸ್ವೀಕರಿಸಿಲಿಲ್ಲವೆಂದು ಹೇಳಲಾಗಿದೆ. ಇದರಿಂದ ಮನನೊಂದ ಹರೀಶ್ ಸಾವಿಗೆ ಶರಣಾಗಿದ್ದಾನೆ. ಈ ಸಂಬಂಧ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment