ಮನೋರಂಜನೆ

ಬಾಲಿವುಡ್ ನಟನ ಈ ಫೋಟೋಕ್ಕೆ ಬರುತ್ತಿವೆ ಭರ್ತಿ ಕಮೆಂಟ್ ಗಳು

Pinterest LinkedIn Tumblr

1178IndiaTv62a156_anupam-kher-mainಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿರುವ ಖ್ಯಾತ ಬಾಲಿವುಡ್ ನಟರೊಬ್ಬರು ಹಾಕಿರುವ ಫೋಟೋಗೆ ಭರ್ತಿ ಕಮೆಂಟ್ ಗಳು ಬರುತ್ತಿದ್ದು, ತಮಾಷೆಯಾಗಿವೆ.

ತಮ್ಮ ಸಮಯೋಚಿತ ಹಾಸ್ಯಪ್ರಜ್ಞೆಗೆ ಹೆಸರುವಾಸಿಯಾಗಿರುವ ನಟ ಅನುಪಮ್ ಕೇರ್ ತಮ್ಮ ದೇಹಕ್ಕಂಟಿಕೊಂಡಂತಿರುವ ಟೀ ಶರ್ಟ್ ಧರಿಸಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದು, ಆ ಟೀ ಶರ್ಟ್ ಮೇಲಿರುವ ‘ಮೆಸ್ಸಿ ಹೇರ್, ಡೋಂಟ್ ಕೇರ್’ ಪದ ಈಗ ತಮಾಷೆಯ ಸಂಗತಿಯಾಗಿ ಪರಿಣಮಿಸಿದೆ.

ಅನುಪಮ್ ಖೇರ್ ಅವರ ತಲೆಯಲ್ಲಿ ಕೂದಲಿರದಿರುವುದರಿಂದ ಕೆಲವರು ‘ನೋ ಹೇರ್ ಡೋಂಟ್ ಕೇರ್’ ಎಂದು ಟ್ವೀಟ್ ಮಾಡಿದ್ದರೆ, ಮತ್ತೆ ಕೆಲವರು ಇಂಟರ್ನೆಟ್ ನಲ್ಲಿ ನೋಡಿ ಟೀ ಶರ್ಟ್ ಖರೀದಿಸಿದರೆ ಇದೇ ಪರಿಸ್ಥಿತಿ ಬರುತ್ತದೆ ಎಂದಿದ್ದಾರೆ. ಸಲ್ಮಾನ್ ಖಾನ್, ನೇಹಾ ಧೂಪಿಯಾ, ಶೃತಿ ಸೇಥ್ ಸೇರಿದಂತೆ ಕೆಲವು ಬಾಲಿವುಡ್ ನಟ- ನಟಿಯರು ತಮ್ಮ ವಿವಾದಾತ್ಮಕ ಟ್ವೀಟ್ ಗಳ ಕಾರಣಕ್ಕಾಗಿ ಸುದ್ದಿಯಾಗಿದ್ದರೆ ನಟ ಅನುಪಮ್ ಖೇರ್ ಹಾಸ್ಯ ಪ್ರಜ್ಞೆ ಮೆರೆದು ಟ್ವಿಟ್ಟಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

Write A Comment