ಮನೋರಂಜನೆ

ಕತ್ರೀನಾ- ರಣಬೀರ್ ಸಂಬಂಧ ಬಿಚ್ಚಿಟ್ಟ ಸೈಫ್

Pinterest LinkedIn Tumblr

3891272427Saifkatrinaಬಾಲಿವುಡ್ ಜೋಡಿಗಳಾದ ಕತ್ರೀನಾ ಕೈಫ್ ಹಾಗೂ ರಣಬೀರ್ ಕಪೂರ್ ನಡುವಣದ ಸಂಬಂಧ ಈಗಾಗಲೇ ಜಗಜ್ಜಾಹೀರಾಗಿದ್ದರೂ ಕುಟುಂಬಸ್ಥರು ಮಾತ್ರ ಸಮಯ ಸಿಕ್ಕಾಗಲೆಲ್ಲಾ ಅದನ್ನು ಬಹಿರಂಗಗೊಳಿಸುತ್ತಿದ್ದಾರೆ.

ಕರೀನಾ ಕಪೂರ್ ಜೊತೆ ವಿವಾಹವಾದ ಬಳಿಕ ಕಪೂರ್ ಕುಟುಂಬದ ಸಂಬಂಧ ಹೊಂದಿದ ಬಾಲಿವುಡ್ ನಟ ಸೈಫ್ ಆಲಿ ಖಾನ್ ಈಗ ಕತ್ರೀನಾ ಹಾಗೂ ರಣಬೀರ್ ಸಂಬಂಧದ ಕುರಿತು ಮಾತನಾಡಿದ್ದಾರಲ್ಲದೇ ಕತ್ರೀನಾಳನ್ನು ಹಾಡಿ ಹೊಗಳಿದ್ದಾರೆ. ಈ ಹಿಂದೆ ಕರಣ್ ಜೋಹರ್ ಜೊತೆಗಿನ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಕತ್ರೀನಾರನ್ನು ‘ಬಾಬಿ’ ಎಂದು ಕರೀನಾ ಕರೆದಿದ್ದು ಈಗ ಸೈಫ್ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಸೈಫ್ ಆಲಿ ಖಾನ್ ಮತ್ತು ಕತ್ರೀನಾ ಕೈಫ್ ಅಭಿನಯದ ‘ಫ್ಯಾಂಟಮ್’ ಚಿತ್ರದ ಟ್ರೇಲರ್ ಶನಿವಾರ ಬಿಡುಗಡೆಯಾಗಿದ್ದು, ಈ ವೇಳೆ ಮಾತನಾಡಿದ ಸೈಫ್ ಆಲಿ ಖಾನ್, ಕತ್ರೀನಾ ಕೈಫ್ ರಂತಹ ಗೆಳತಿಯನ್ನು ಪಡೆಯಲು ರಣಬೀರ್ ಅದೃಷ್ಟ ಮಾಡಿದ್ದರೆಂದು ಹೇಳಿದ್ದಾರೆ. ಅಲ್ಲದೇ ಇವರಿಬ್ಬರ ನಡವಣದ ಸಂಬಂಧ ಕೆಲವೇ ದಿನಗಳಲ್ಲಿ ಮತ್ತಷ್ಟು ಮುಂದೆ ಹೋಗುವುದಾಗಿ ಹೇಳುವ ಮೂಲಕ ಈ ಜೋಡಿಯ ವಿವಾಹ ಶೀಘ್ರದಲ್ಲೇ ನಡೆಯಲಿದೆ ಎಂಬ ಮುನ್ಸೂಚನೆ ನೀಡಿದ್ದಾರೆ.

Write A Comment