ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ದುನಿಯಾ ವಿಜಯ್ ಇದೀಗ ಕಿಸ್ಸಿಂಗ್ ದೃಶ್ಯವೊಂದರಿಂದ ಸುದ್ದಿಯಾಗಿದ್ದಾರೆ.
ಹೌದು. ದುನಿಯಾ ವಿಜಿ ನಟಿಸುತ್ತಿರುವ ಹೊಸ ಸಿನಿಮಾದ ದೃಶ್ಯದಲ್ಲಿ ನಾಯಕಿ ಆಕಾಂಕ್ಷಾ ಜತೆ ವಿಜಯ್ ಲಿಪ್ಲಾಕ್ ಮಾಡಿದ್ದು ಈ ಫೋಟೋಗಳ ಕುರಿತಾಗಿ ಗಾಂಧಿನಗರದಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿದೆ.
ತೆಲುಗು ಹಾಗೂ ಕನ್ನಡದಲ್ಲಿ ಏಕ ಕಾಲದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ವಿಜಿ ಅವರ ಕಿಸ್ಸಿಂಗ್ ಫೋಟೋಗಳು ಸೋರಿಕೆಯಾಗಿದ್ದು ಈ ನಡುವೆ ಸಿನಿಮಾದ ಫೋಟೋಗಳೇ ಅಲ್ಲ ಎಂಬ ಮಾತೂ ಕೇಳಿ ಬರುತ್ತಿದೆ. ಅಲ್ಲದೇ ಆರ್ಎಕ್ಸ್ ಸೂರಿ ಮತ್ತು ಪೆರಿಟಾಲ ರವಿ ನಡುವಿನ ಕತೆಯಿರುವ ಈ ಚಿತ್ರದಲ್ಲಿ ಹೇರಳವಾಗಿ ಆ್ಯಕ್ಷನ್ ದೃಶ್ಯಗಳಿದ್ದು ಇಂತಹ ಕತೆಯಲ್ಲಿ ಲಿಪ್ಲಾಕ್ ದೃಶ್ಯ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಯೂ ಎದ್ದಿದೆ.
ಏನೇ ಇರಲಿ, ನಟಿಯರ ಕಿಸ್ಸಿಂಗ್ ಸುದ್ದಿಗಳ ನಡುವೆ ಕನ್ನಡದ ಪ್ರತಿಭಾನ್ವಿತ ನಟನೊಬ್ಬ ಈ ಮುತ್ತಿನ ಮತ್ತಿನಲ್ಲಿ ಸುದ್ದಿಯಾಗಿರುವುದು ಮಾತ್ರ ಕನ್ನಡದ ಪ್ರೇಕ್ಷಕರಿಗೆ ಅಚ್ಚರಿ ತರಿಸಿದ್ದಂತೂ ಸತ್ಯ.