ದೆಹಲಿಯಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು ನೆರೆ ಮನೆಯ ಕಾಮುಕ ಯುವಕನಿಂದ ಭೀಕರವಾಗಿ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಇಲ್ಲಿನ ಖಾಜೂರಿ ಪ್ರದೇಶದಲ್ಲಿ ಜುಲೈ 8 ರಂದು 9 ವರ್ಷದ ಬಾಲಕಿ ಮನೆಯ ಮುಂದೆ ತನ್ನ ಕಸಿನ್ ಜತೆ ಆಟವಾಡುತ್ತಿದ್ದ ಸಮಯದಲ್ಲಿ ಅಲ್ಲಿಗೆ ಬಂದಿದ್ದ ನೆರೆಮನೆಯ 35 ವರ್ಷದ ಬಿಹಾರಿಯೊಬ್ಬ ಐಸ್ ಕ್ರೀಮ್ ಆಮಿಷವೊಡ್ಡಿ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದನಲ್ಲದೇ, ಅಷ್ಟರಲ್ಲಿ ಬಾಲಕಿಯನ್ನು ಹುಡುಕಿಕೊಂಡು ಅಲ್ಲಿಗೆ ಬಂದಿದ್ದ ಬಾಲಕಿಯ ಕಸಿನ್ ಗೆ ಈ ಕುರಿತು ಯಾರಿಗಾದರೂ ತಿಳಿಸಿದರೆ ನೀವಿಬ್ಬರೂ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ಕಳುಹಿಸಿದ್ದಾನೆ.
ಆದರೆ ಮನೆಗೆ ಬಂಡ ಬಾಲಕಿ ತನ್ನ ತಾಯಿಯ ಬಾಲಿ ನಡೆದ ಕೃತ್ಯದ ಕುರಿತು ತಿಳಿಸಿದ್ದು ಪೋಷಕರು ಆತನ ಮನೆಗೆ ಬರುವಷ್ಟರಲ್ಲಿ ಆತ ಪರಾರಿಯಾಗಿದ್ದ ಎನ್ನಲಾಗಿದೆ. ಅಲ್ಲದೇ ಈ ನಡುವೆ ಪ್ರಜ್ಞೆ ಕಳೆದುಕೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಾವನ್ನಪ್ಪಿದ್ದಾಳೆ.
ಈ ಕುರಿತು ದೂರು ದಾಖಲಾಗಿದ್ದು ಆರೋಪಿಯ ವಿರುದ್ದ ಐಪಿಸಿ ವಿಭಾಗ 376, 506 ಹಾಗೂ ಪೋಸ್ಕೋ ಕಾಯಿದೆಯಡಿ ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.