ಮನೋರಂಜನೆ

‘ನನಗೂ ನಿನಗೂ’ ಚಿತ್ರಕ್ಕೆ ಇಟಗಿ ಈರಣ್ಣ ಅವರ ಶಾಯರಿ

Pinterest LinkedIn Tumblr

psmec11nanaguದಾಸ ಆರ್ಟ್ಸ್ ಲಾಂಛನದಲ್ಲಿ ಲಕ್ಷ್ಮೀನರಸಿಂಹಯ್ಯ ಹಾಗೂ ಶಿವಗಂಗೆ ಸುರೇಶ್ ಅವರು ನಿರ್ಮಿಸುತ್ತಿರುವ ‘ನನಗೂ ನಿನಗೂ’ ಚಿತ್ರಕ್ಕೆ ಇಟಗಿ ಈರಣ್ಣ ಶಾಯರಿ ಹಾಗೂ ಹಾಡೊಂದನ್ನು ಬರೆದಿದ್ದಾರೆ. ಇದಕ್ಕೂ ಮುನ್ನ ಇವರು ಸುನೀಲ್‌ಕುಮಾರ್ ದೇಸಾಯಿ ನಿರ್ದೇಶನದ ‘ಸ್ಪರ್ಶ’ ಚಿತ್ರಕ್ಕೆ ಶಾಯರಿಗಳನ್ನು ಬರೆದಿದ್ದರು.

ಆಕಾಶ್‌ ಗುಬ್ಬಿ ನಿರ್ದೇಶನದ ಈ ಚಿತ್ರಕ್ಕೆ ಇದೇ ತಿಂಗಳಲ್ಲಿ ಗೋವಾ, ಶಿರಸಿ, ಹೊನ್ನಾವರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಗುರುಪ್ರಸಾದ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ನಾಗೇಂದ್ರ ಅರಸ್ ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ವಿ.ನಾಗೇಂದ್ರಪ್ರಸಾದ್ ಬರೆದಿದ್ದಾರೆ. ವಿಜಯ್‌ ಸೂರ್ಯ, ನೇಹಾ ಪಾಟೀಲ್, ನಾಗೇಂದ್ರ ಷಾ,  ಸಂಗೀತ, ಕಿಲ್ಲರ್ ವೆಂಕಟೇಶ್, ಕೈಲಾಷ್ ನೀನಾಸಂ, ಮೋಹನ್ ಜುನೇಜ, ಸಂಕೇತ್ ಕಾಶಿ, ಶಂಕರ್ ಭಟ್ ಮುಂತಾದವರು ತಾರಾಬಳಗದಲ್ಲಿ ಇದ್ದಾರೆ.

Write A Comment