ಗಲ್ಫ್

ಕನ್ನಡ ಸ೦ಘ ಬಹ್ರೈನ್ ; ಬಾ೦ಧವ್ಯ ಮೆರೆದ ಇಫ಼್ತಾರ್ ಕೂಟ

Pinterest LinkedIn Tumblr

DSC_0405 - Copy

ಕನ್ನಡ ಸ೦ಘ ಬಹ್ರೈನ್ ಇತ್ತೆಚೆಗೆ ರಮಜ಼ಾನ್ ಇಫ಼್ತಾರ್ ಕೂಟವನ್ನು ಏರ್ಪಡಿಸಿತ್ತು. ಪ್ರತಿ ವರ್ಷದ೦ತೆ ಈ ವರ್ಷವೂ ಏರ್ಪಡಿಸಿದ್ದ ಕೂಟದಲ್ಲಿ ಸುಮಾರು ನೂರ ಐವತ್ತರಷ್ಟು ಪುರುಷರು, ಮಹಿಳೆಯರು ಮತ್ತು ಮಕ್ಕಳು ಪಾಲ್ಗೊ೦ಡರು.

DSC_0375

DSC_0344

DSC_0339

ಕಾರ್ಯಕ್ರಮಕ್ಕೆ ವಿಶೇಷ ಅಹ್ವಾನಿತರಾಗಿ ಆಗಮಿಸಿದ್ದ ಶ್ರೀ ಅಬ್ದುಲ್ ಹಮೀದ್ ಈಸಾ ಜೇನು ನೊಣದ ಉದಾಹರಣೆಯೊ೦ದಿಗೆ ಜೇನಿನ೦ತೆ ಬದುಕುವ ಸ೦ದೇಶ ನೀಡಿದರೆ, ಶ್ರೀ ಶಾಹಿದ್ ಚೌಧರಿ ರಮಜ಼ಾನ್ ತಿ೦ಗಳಿನಲ್ಲಿನ ಉಪವಾಸದ ಮಹತ್ವವನ್ನು ತಿಳಿಸಿದರು. ಅಧ್ಯಕ್ಷರಾದ ಶ್ರೀ ರಾಜೇಶ್ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿದರಲ್ಲದೆ, ಗಣ್ಯರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಶ್ರೀಯುತರುಗಳಾದ ಶಹಿರ್ ಕಮಾಲ್, ಶ್ರೀ ಮೊಹಮ್ಮದ್ ಮನ್ಸೂರ್ ಮತ್ತು ಕಾರ್ಯಕ್ರಮದ ನೇತೃತ್ವ ವಹಿಸಿದ ಶ್ರೀ ಅಬ್ದುಲ್ ರಜ಼ಾಕ್ ವೇದಿಕೆಯ ಮೇಲಿದ್ದರು. ಮನರ೦ಜನಾ ಕಾರ್ಯದರ್ಶಿ ಶ್ರೀ ಮೋಹನ್ ಎಡನೀರ್, ಶ್ರೀ ಸಯೀದ್ ಹೆಜ್ಮಾಡಿ, ಶ್ರೀ ಅಖ್ತರ್ ಅಹ್ಮದ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದರು.

Write A Comment