ಅಂತರಾಷ್ಟ್ರೀಯ

ವಿಡಿಯೋ ಗೇಮ್ ಆಡಗೊಡದ ಯುವತಿಯನ್ನು ಎಚ್ಚರ ತಪ್ಪಿಸಿದ ಯುವಕ

Pinterest LinkedIn Tumblr

6081A-person-plays-a-video-ga-006ವಿಡಿಯೋ ಗೇಮ್ ಆಡಲು ಅಡ್ಡಿ ಪಡಿಸುತ್ತಾಳೆ ಎಂದು ಗೆಳತಿಗೆ ಚಹಾದಲ್ಲಿ ಮತ್ತು ಬರುವ ಮದ್ದು ಬೆರೆಸಿ ನೀಡಿದ ಯುವಕನೊಬ್ಬ ದಂಡ ತೆತ್ತ ಘಟನೆ ನಡೆದಿದೆ.

ಜರ್ಮನಿಯ ಬರ್ಲಿನ್ ನಲ್ಲಿ ಈ ಘಟನೆ ನಡೆದಿದ್ದು 2014 ಅಗಸ್ಟ್ ನಲ್ಲಿ ಯುವಕನೊಬ್ಬ ಮನೆಯಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ. ಈ ಸಮಯದಲ್ಲಿ ಅಲ್ಲಿಗೆ ಬಂದ ಆತನ ಗೆಳತಿ ಆಟವಾಡಲು ಬಿಡಲಿಲ್ಲ. ಇದರಿಂದ ಆಕ್ರೋಶಗೊಂಡ ಯುವಕ ಆಕೆಗೆ ಮತ್ತು ಬರುವ ಮದ್ದನ್ನು ಟೀ ನಲ್ಲಿ ಬೆರೆಸಿ ನೀಡಿದ್ದ. ಪರಿಣಾಮ ಆಕೆ ಒಂದು ದಿನ ಪೂರ್ತಿ ಎಚ್ಚರ ತಪ್ಪಿದ್ದಳು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಆಕೆ ಪೊಲೀಸರಿಗೆ ದೂರು ದಾಖಲಿಸಿದ್ದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಆತನಿಗೆ 500 ಯುರೋ ದಂಡ ವಿಧಿಸಿ ಆದೇಶಿಸಿದೆ.

Write A Comment