ರಾಷ್ಟ್ರೀಯ

ಫೇಸ್‌ಬುಕ್‌ನಲ್ಲಿ ನಿಮಗೆ ಜಾಸ್ತಿ ಲೈಕ್ಸ್ ಸಿಗುತ್ತಿದೆಯಾ? ಎಚ್ಚರ !

Pinterest LinkedIn Tumblr

vedioಭೋಪಾಲ್: ಫೇಸ್‌ಬುಕ್‌ನಲ್ಲಿ ಹೆಚ್ಚೆಚ್ಚು ಲೈಕ್ಸ್ ಮತ್ತು ಕಮೆಂಟ್ ಪಡೆಯುವುದು ಈಗ ಪ್ರತಿಷ್ಠೆಯ ವಿಷಯ. ಮತ್ತೊಬ್ಬರಿಗೆ ತಮಗಿಂತ ಹೆಚ್ಚು ಲೈಕ್ಸ್ ಸಿಗುತ್ತಿದೆ ಎಂಬುದು ಸಹ ಈಗ ಯುವಜನರಿಗೆ ಪರಷ್ಪರ ಕರುಬುವ ವಿಚಾರವಾಗಿ ಬಿಟ್ಟಿದೆ.

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದಿದ್ದು ಇದೇ. ಫೇಸ್‌ಬುಕ್‌ನಲ್ಲಿ ಹೆಚ್ಚು ಲೈಕ್ಸ್ ಪಡೆದಿದ್ದಾನೆಂಬ ಅಸೂಯೆಯಲ್ಲಿ  ಯುವಕರ ಗುಂಪೊಂದು ಯುವಕನೊಬ್ಬನನ್ನು ಮನಬಂದಂತೆ ಥಳಿಸಿದೆ.

ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದರಲ್ಲಿ  ಪ್ರಕಟವಾದ ಸುದ್ದಿಯ ಪ್ರಕಾರ ಯುವಕನೊಬ್ಬನನ್ನು ಅಪಹರಿಸಿದ ಯುವಕರ ಗುಂಪು ಹಿಗ್ಗಾಮುಗ್ಗಾ ಥಳಿಸಿ ತಲೆಯನ್ನು ಬೋಳಿಸಿದ್ದಾರೆ. ಪೀಡಿತನ ಸಹೋದರ ಹೇಳುವ ಪ್ರಕಾರ ತನ್ನ ಸಹೋದರ ಫೇಸ್‌ಬುಕ್‌ಲ್ಲಿ ವಿಭಿನ್ನ ಫೋಟೋಗಳನ್ನು ಹಾಕುತ್ತಿದ್ದ. ಸಹಜವಾಗಿ ಆತನಿಗೆ ಹೆಚ್ಚಿನ ಲೈಕ್ಸ್‌ಗಳು ಬರುತ್ತಿದ್ದವು.

ಇದರಿಂದ ಅಸೂಯೆಗೊಂಡ ಕೆಲವು ಪುಡಾರಿ ಹುಡುಗರು ಆತನಿಗೆ ಕರೆ ಮಾಡಿ ನಿನಗೆ ಜಾಸ್ತಿ ಲೈಕ್ಸ್‌ಗಳು ಬರುತ್ತಿವೆ ಎಂದು ಹೇಳಿ ಬಾಯಿಗೆ ಬಂದಂತೆ ಬೈದಿದ್ದರು. ಅವರೇ ನನ್ನ ಸಹೋದರನನ್ನು ಅಪಹರಿಸಿ ದೌರ್ಜನ್ಯವೆಸಗಿದ್ದಾರೆ ಎಂದು ಪೀಡಿತನ ಸಹೋದರ ದೂರು ನೀಡಿದ್ದಾನೆ.

ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

Write A Comment