ಕೌಲಾಲಂಪುರ: ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ಜೊತೆ ಸಂಬಂಧದ ಶಂಕೆಯ ಮೇರೆಗೆ ಇಬ್ಬರನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ನೀಡಿರುವ ಹೇಳಿಕೆಯ ಪ್ರಕಾರ ಈ ಇಬ್ಬರೂ ಕ್ವಾಲಾಲಂಪುರ ಮತ್ತು ಸೆಲಂಗೋರ್ ನಲ್ಲಿ ಭೇಟಿ ಮಾಡಿದ್ದರು ಮತ್ತು ದೇಶದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಚಾನೆಲ್ ನ್ಯೂಸ್ ಏಶಿಯಾ ವರದಿಮಾಡಿದೆ.
ಜುಲೈ ೨ ರಂದು ಕ್ವಾಲಾಲಂಪುರದಿಂದ ಮೊದಲ ಶಂಕಿತನನ್ನು ಬಂಧಿಸಲಾಗಿದೆ. ಈ ೨೮ ವರ್ಷದ ಯುವಕ ಯೂರೋಪಿನ ಇಸ್ಲಾಮಿಕ್ ಸ್ಟೇಟ್ ಸದಸ್ಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಹಾಗೂ ರಾಜಧಾನಿ ಮತ್ತು ಕ್ಲ್ಯಾಂಗ್ ಕಣಿವೆಯ ಮೇಲೆ ದಾಳಿ ನಡೆಸಲು ಸೂಚನೆಯನ್ನು ಪಡೆದಿದ್ದ ಎಂದು ತಿಳಿಯಲಾಗಿದೆ.
ಎರಡನೆ ಶಂಕಿತ ಕ್ವಾಲಾಲಂಪುರದ ೩೧ ವರ್ಷದ ಯುವಕ. ಸಿರಿಯಾದಲ್ಲಿ ಭಯೋತ್ಪಾದಕರ ಜೊತೆಗೂಡಿ ಯುದ್ಧ ಮಾಡುವಾಗ ಗಾಯಗೊಂಡು ಮಲೇಶಿಯಾಕ್ಕೆ ಹಿಂದಿರುಗಿದ್ದ ಎಂದು ತಿಳಿದುಬಂದಿದೆ.