ರಾಷ್ಟ್ರೀಯ

ಸೋನಿಯಾ ಸಹೋದರಿಗೆ 360 ಕೋಟಿ ನೀಡಲು ಸೂಚಿಸಲಾಗಿತ್ತಂತೆ ಮೋದಿಗೆ

Pinterest LinkedIn Tumblr

1758Lalit-Modi-getty-1_1359658cಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಲಂಡನ್ ನಲ್ಲಿ ಕುಳಿತೇ ಭಾರತದ ಕ್ರಿಕೆಟ್ ಆಟಗಾರರು ಹಾಗೂ ರಾಜಕಾರಣಿಗಳ ಮೇಲೆ ಟ್ವೀಟಾಸ್ತ್ರ ಪ್ರಯೋಗಿಸುತ್ತಿದ್ದು, ಈಗ ಮತ್ತೊಂದು ಟ್ವೀಟ್ ಮೂಲಕ ಸುದ್ದಿಯಾಗಿದ್ದಾರೆ.

ಬಿಜೆಪಿ ಸಂಸದ ವರುಣ್ ಗಾಂಧಿ ಲಂಡನ್ ನ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಹೋದರಿಗೆ 360 ಕೋಟಿ ರೂ. ನೀಡಿದರೆ ಸೋನಿಯಾ ಜೊತೆ ಮಾತನಾಡಿ ನಿಮ್ಮ ಮೇಲಿರುವ ಆರೋಪಗಳಿಂದ ಮುಕ್ತಗೊಳಿಸುವುದಾಗಿ ತಿಳಿಸಿದ್ದರೆಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ.

ವರುಣ್ ಗಾಂಧಿ ತಮ್ಮನ್ನು ಭೇಟಿ ಮಾಡಿದ್ದಕ್ಕೆ ಖ್ಯಾತ ಜ್ಯೋತಿಷಿಯೊಬ್ಬರು ಸಾಕ್ಷಿಯಾಗಿದ್ದರು ಎಂದು ತಮ್ಮ ಟ್ವೀಟ್ ನಲ್ಲಿ ತಿಳಿಸಿರುವ ಲಲಿತ್ ಮೋದಿ, ಇದನ್ನು ಹೊರತುಪಡಿಸಿ ಕೆಲವೊಂದು ರೆಕಾರ್ಡಿಂಗ್ ಸಹ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದಾರೆ.

ಈ ಹಿಂದೆ ಸೋನಿಯಾ ಗಾಂಧಿಯವರ ಪುತ್ರಿ ಪ್ರಿಯಾಂಕಾ ಗಾಂಧಿ ಮತ್ತವರ ಪತಿ ರಾಬರ್ಟ್ ವಾದ್ರಾ ತಮ್ಮನ್ನು ಭೇಟಿ ಮಾಡಿದ್ದರೆಂದು ಹೇಳಿದ್ದ ಲಲಿತ್ ಮೋದಿ, ಈಗ ಸೋನಿಯಾ ಗಾಂಧಿಯವರ ಸಹೋದರಿಗೆ 360 ಕೋಟಿ ರೂ. ನೀಡುವಂತೆ ಸೂಚಿಸಲಾಗಿತ್ತು ಎಂದು ಹೇಳುವ ಮೂಲಕ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಈ ಮಧ್ಯೆ ಲಲಿತ್ ಮೋದಿ ಅವರನ್ನು ಲಂಡನ್ ನಲ್ಲಿ ಭೇಟಿಯಾಗಿರುವುದನ್ನು ಒಪ್ಪಿಕೊಂಡಿರುವ ವರುಣ್ ಗಾಂಧಿ, ಆದರೆ ಲಲಿತ್ ಮೋದಿ ಹೇಳುತ್ತಿರುವಂತೆ ಯಾವ ಮಾತುಕತೆಗಳೂ ನಡೆದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Write A Comment