ನವದೆಹಲಿ: ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪ್ರಧಾನಿಗಳಿಗೆ ರಂಜಾನ್ ಶುಭ ಕೋರಲು ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿದ್ದನ್ನು ವಿರೋಧಿಸಿ ಮಾಜಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜಯ್ ಜೋಷಿಯವರ ಫೋಟೋ ಇರುವ ಭಿತ್ತಿಚಿತ್ರಗಳನ್ನು ಮಂಗಳವಾರ ಹಲವು ಬಿಜೆಪಿ ಮುಖಂಡರ ಮನೆಗಳ ಹೊರಗೆ ರಾರಾಜಿಸುತ್ತಿವೆ.
ಪಕ್ಷದ ಹೆಸರು ಹಾಳುಮಾಡುವಂತಹ ಪೋಸ್ಟರ್ ಗಳನ್ನು ಹಾಕದಂತೆ ಜೋಶಿ ಅವರು ಕಳೆದ ತಿಂಗಳು ಮನವಿ ಮಾಡಿದ್ದರು ಕೂಡ ಕೇಂದ್ರ ದೆಹಲಿಯ ಹಲವು ಭಾಗಗಳಲ್ಲಿ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಈ ಪೋಸ್ಟರ್ ಗಳಲ್ಲಿ ನರೇಂದ್ರ ಮೋದಿ ಅಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಫೋಟೊಗಳನ್ನು ಪ್ರದರ್ಶಿಸಿದ್ದರು ಅವರ ಹೆಸರುಗಳನ್ನೂ ನಮೂದಿಸಿಲ್ಲ.
ಅಮಿತ್ ಷಾ, ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖ್ಯ ಕಛೇರಿಗಳ ಹೊರಗೆ ಈ ಭಿತ್ತಿಚಿತ್ರಗಳನ್ನು ಹಾಕಲಾಗಿದೆ.”ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ರಂಜಾನ್ ಹಬ್ಬಕ್ಕೆ ಶುಭಾಷಯ ಕೋರುತ್ತೀರಿ ಆದರೆ ಸುಷ್ಮಾ, ಅಡ್ವಾಣಿ, ಸಂಜಯ್ ಜೋಷಿ. ರಾಜನಾಥ್, ಗಡ್ಕರಿ, ಮುರಳಿ ಮನೋಹರ್ ಜೋಷಿ, ವಸುಂಧರಾ ರಾಜೆ ವಿರುದ್ಧ ಕೆಟ್ಟದಾಗಿ ನಡೆದುಕೊಳ್ಳುತ್ತೀರಿ. “ಸಂವಾದ ಇಲ್ಲ, ಮನದ ಮಾತೂ ಇಲ್ಲ, ಎಲ್ಲರ ಒಟ್ಟಿಗೂ ಇಲ್ಲ, ಎಲ್ಲರ ವಿಕಾಸವೂ ಇಲ್ಲ ಆದರೆ ಜನ ನಿಮ್ಮನ್ನು ಏಕೆ ನಂಬಬೇಕು” ಎಂದು ಪೋಸ್ಟರ್ ಗಳ ಮೇಲೆ ಬರೆಯಲಾಗಿದೆ.
ತಾವಿನ್ನೂ ಸಕ್ರಿಯ ಬಿಜೆಪಿ ಕಾರ್ಯಕರ್ತ ಮತ್ತು ನರೇಂದ್ರ ಮೋದಿ ತಮ್ಮ ನಾಯಕ ಎಂದು ಹೇಳಿಕೊಂಡು ಜೋಶಿ ಅವರು, ಪಕ್ಷಕ್ಕೆ ಮಸಿ ಬಳಿಯುವ ಯಾವುದೇ ಪೋಸ್ಟರ್ ಗಳನ್ನು ಹಾಕದಂತೆ ತಮ್ಮ ಬೆಂಬಲಿಗರಿಗೆ ಮೇ ೨೧ರಂದು ಮನವಿ ಮಾಡಿದ್ದರು. ೨೦೦೫ರಲ್ಲಿ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಸಂಜಯ್ ಜೋಶಿಯವರನ್ನು ಬಿಜೆಪಿ ಪಕ್ಷದಿಂದ ವಜಾ ಮಾಡಲಾಗಿತ್ತು.
