ಬೈರುತ್, ಜೂ.23: ಮುಸ್ಲಿಂರ ಪವಿತ್ರ ರಂಜಾನ್ ಆಚರಣೆ ವೇಳೆ ಉಪವಾಸವಿರದೇ ತಿಂದಿದ್ದಕ್ಕೆ ಇಬ್ಬರು ಬಾಲಕರಿಗೆ ಐಸಿಸ್ ನೇಣು ಹಾಕಿದೆ.
ಇಸ್ಲಾಂ ಧರ್ಮದ ಪ್ರಕಾರ ಪವಿತ್ರ ರಂಜಾನ್ ವೇಳೆ ಬೆಳಿಗ್ಗೆ ಸೂರ್ಯೋದಯದಿಂದ ಸಂಜೆ ಸೂರ್ಯಾಸ್ತವಾಗುವರೆಗೂ ಮುಸ್ಲಿಂ ಹನಿ ನೀರನ್ನು ಕುಡಿಯದೇ ಉಪವಾಸವಿರುವುದು ವಾಡಿಕೆ. ಆದರೆ, ಈ ನತದೃಷ್ಟ ಬಾಲಕರು ಕದ್ದು ತಿನ್ನುತ್ತಿದ್ದಾರೆ ಎಂದು ಐಸಿಸ್ ಇಂತಹ ಘೋರ ಶಿಕ್ಷೆ ನೀಡಿದೆ.
ಇಲ್ಲಿನ ಡೈರ್ ಇಜೋರ್‌ನ ಮಾಯದ್ದಿನ್ ಗ್ರಾಮದಲ್ಲಿ 18 ವರ್ಷದೊಳಗಿನ ಇಬ್ಬರು ಬಾಲಕರನ್ನು ಐಸಿಸ್ ನೇಣು ಹಾಕಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಬಾಲಕರನ್ನು ನೇಣುಹಾಕಿದ ಐಸಿಸ್, ಅವರು ಪವಿತ್ರ ರಂಜಾನ್ ವೇಳೆ ಉಪವಾಸ ಮಾಡದೇ ಧರ್ಮಕ್ಕೆ ಧಕ್ಕೆ ತಂದಿದ್ದಾರೆ. ಧರ್ಮಕ್ಕೆ ನ್ಯಾಯ ಒದಗಿಸಿಲ್ಲ ಎಂದು ಪತ್ರಿಕಾ ಪ್ರಕಟಣೆಯನ್ನು ನೇತು ಹಾಕಲಾಗಿದೆ.
ರಂಜಾನ್ ಆಚರಣೆ ಪ್ರಾರಂಭವಾದಾಗ ಮುಸ್ಲಿಮರು ತಿನ್ನುವುದು, ನೀರು ಕುಡಿಯುವುದು, ಧೂಮಪಾನ ಹಾಗೂ ಲೈಂಗಿಕ ಕ್ರಿಯೆಯಲ್ಲೂ ತೊಡಗಿಕೊಳ್ಳುವಂತಿಲ್ಲ.
ಸಿರಿಯಾ ಹಾಗೂ ಇರಾಕ್‌ನಲ್ಲಿ ಇಸ್ಲಾಂ ಧರ್ಮಕ್ಕೆ ವಿರೋಧವಾಗಿ ನಡೆದುಕೊಂಡರೆ ಐಸಿಸ್ ಕೂಡ ಶಿಕ್ಷೆ ನೀಡಲಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ.
