ಖ್ಯಾತ ನಟ ಅನಿಲ್ ಕಪೂರ್ ಪುತ್ರಿ, ಬಾಲಿವುಡ್ ನಟಿ ಸೋನಂ ಕಪೂರ್ ಅವರಿಗೆ ರೂಪದರ್ಶಿ ಅಬ್ರಾರ್ ಜೋಹರ್ ಕಪಾಳ ಮೋಕ್ಷ ಮಾಡಿದ್ದಾರೆ. ಅಷ್ಟೇ ಅಲ್ಲ ಆಕೆಯ ಹೊಟ್ಟೆಗೆ ಮುಷ್ಟಿಯಿಂದ ಗುದ್ದಿದ ಪರಿಣಾಮ ಸೋನಂ ಕಪೂರ್ ಕೆಳಕ್ಕೂ ಬಿದ್ದಿದ್ದಾರೆ.
ಅಬ್ರಾರ್ ಜೋಹರ್ ಇದನ್ನು ಸಿನಿಮಾಕ್ಕಾಗಿಯೇ ಮಾಡಿದ್ದರೂ ದೃಶ್ಯ ನೈಜವಾಗಿ ಬರಲೆಂಬ ಕಾರಣಕ್ಕಾಗಿ ಸೋನಂ ಕಪೂರ್ ರಿಯಲ್ ಆಗಿಯೇ ಅಬ್ರಾರ್ ರಿಂದ ಹೊಡೆಸಿಕೊಂಡಿದ್ದಾರೆ. 1986 ರಲ್ಲಿ ನಡೆದಿದ್ದ ವಿಮಾನ ಹೈಜಾಕ್ ಪ್ರಕರಣದಲ್ಲಿ ಹಲವರ ಪ್ರಾಣ ರಕ್ಷಣೆಗೆ ಕಾರಣರಾಗಿದ್ದ ನೀರಜ್ ಭಾನೋಟ್ ಜೀವನಾಧರಿತ ಕಥೆ ಈಗ ಚಿತ್ರವಾಗುತ್ತಿದ್ದು, ಇದರಲ್ಲಿ ಸೋನಂ ಕಪೂರ್ ಅವರದ್ದು ಪ್ರಮುಖ ಪಾತ್ರ.
ಚಿತ್ರದ ಕುರಿತು ಆಪಾರ ನಿರೀಕ್ಷೆಗಳನ್ನಿಟ್ಟುಕೊಂಡಿರುವ ಸೋನಂ ಕಪೂರ್ ಖಳ ನಾಯಕನ ಪಾತ್ರ ಮಾಡುತ್ತಿರುವ ಅಬ್ರಾರ್ ಹೊಡೆಯಲು ಹಿಂದೆ ಮುಂದೆ ನೋಡುತ್ತಿದ್ದ ವೇಳೆ ತಾವೇ ಹೊಡೆಯುವಂತೆ ಪ್ರೋತ್ಸಾಹಿಸಿ ದೃಶ್ಯ ನೈಜವಾಗಿ ಮೂಡಿ ಬರಲು ಕಾರಣಕರ್ತರಾಗಿದ್ದಾರೆ. ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಡ್ಯೂಪ್ ಬೇಡವೆಂದು ಹೇಳಿದ ಸೋನಂ ಕಪೂರ್ ಸ್ವತಃ ತಾವೇ ಇಂತಹ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆನ್ನಲಾಗಿದೆ.
