ಮನೋರಂಜನೆ

ಮುಂಬೈನಲ್ಲಿ ಬಿದ್ದ ಮೊದಲ ಮಳೆಯಲ್ಲಿ ಈ ನಟಿ ಎಂಜಾಯ್ ಮಾಡಿದ್ದೇಗೆ..?

Pinterest LinkedIn Tumblr

tweet1

ಮುಂಬೈ: ರಣ ಬಿಸಿಲಿನಿಂದ ತತ್ತರಿಸಿದ್ದ ಮುಂಬೈನಲ್ಲಿ ಭಾನುವಾರ ಮೊದಲ ಮಳೆ ಬಿದ್ದಿದೆ. ಬಾಲಿವುಡ್ ಚಿತ್ರಗಳಲ್ಲಿ ಮಳೆಯಲ್ಲಿ ನೆನೆಯುತ್ತಾ ತಮ್ಮ ಮಾದಕ ಸೌಂದರ್ಯವನ್ನು ಪ್ರದರ್ಶಿಸುತ್ತಿದ್ದ ತಾರೆಯರು ಈ ಬಾರಿಯ ಮಳೆಯನ್ನು ಸ್ವಾಗತಿಸಿದ್ದೇಗೆ ಎಂಬುದನ್ನು ತಿಳಿಯಲು ಇದನ್ನು ಓದಿ.

ಮುಂಬೈನ ಮಳೆಗೆ ಸಂಭ್ರಮಿಸಿರುವ ಬಾಲಿವುಡ್ ನಟಿ ರವೀನಾ ಟಂಡನ್ ಮಳೆ ಬರುತ್ತಿದ್ದಂತೆಯೇ ಖುಷಿಯಾಗಿ ಕಾರಿನಲ್ಲಿ ಮಕ್ಕಳೊಂದಿಗೆ ಮ್ಯೂಸಿಕ್ ಹಾಕಿಕೊಂಡು ಲಾಂಗ್ ಡ್ರೈವ್ ಹೋಗಿದ್ದರಂತೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರಿನಲ್ಲಿ ತಮ್ಮ ಫೋಟೋವನ್ನು ಅಪ್ ಲೋಡ್ ಮಾಡಿರುವ ರವೀನಾ ‘ಟಿಪ್ ಟಿಪ್ ಬರ್ಸಾ ಪಾನಿ…’ ಎಂದು ತಮ್ಮ ಚಿತ್ರದ ಹಾಡಿನ ಸಾಲುಗಳನ್ನು ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ಬಾಲಿವುಡ್ ನಟಿ ಇಷಾ ಡಿಯೋಲ್, ಮಳೆಗೆ ಕೃತಜ್ಞತೆ ಸಲ್ಲಿಸಿದ್ದಾರಲ್ಲದೇ ನಾವು ನಿನ್ನನ್ನು ಮಿಸ್ ಮಾಡಿಕೊಂಡಿದ್ದೇವೆಂದು ಟ್ವೀಟ್ ಮಾಡಿದ್ದಾರೆ. ಖ್ಯಾತ ಫ್ಯಾಷನ್ ಡಿಸೈನರ್ ಮನೀಷ್ ಮಲೋತ್ರಾ, ನಿರ್ದೇಶಕ ಮಧುರ್ ಭಂಡಾರ್ಕರ್, ನಟ ಕುನಾಲ್ ಕೊಹ್ಲಿ ಮೊದಲಾದವರೂ ಮಳೆ ಬರುತ್ತಿದ್ದಂತೆಯೇ ಈ ಕುರಿತು ಟ್ವೀಟ್ ಮಾಡುವ ಮೂಲಕ ತಮ್ಮ ಖುಷಿ ಹಂಚಿಕೊಂಡಿದ್ದಾರೆ.

Write A Comment