ಕುಡಿತ ಎಂಬುದಕ್ಕೆ ಯಾರು ಏನು ಎಂಬುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಸೋಮವಾರ ರಾತ್ರಿ ಕಂಠ ಪೂರ್ತಿ ಕುಡಿದ ವೈದ್ಯೆಯೊಬ್ಬಳು ಡ್ರೈವಿಂಗ್ ಮಾಡುವಾಗ ಸಿಕ್ಕಿಬಿದ್ದು ಪೊಲೀಸರಿಗೆ ಅವಾಜ್ ಹಾಕಿದ ಘಟನೆ ನಡೆದಿದೆ.
ಹೈದ್ರಾಬಾದ್ ನಲ್ಲಿ ವೀಕೆಂಡ್ ಮಸ್ತಿ ಯನ್ನು ಮುಗಿಸಿ ತನ್ನ ಇಬ್ಬರು ಬಾಯ್ ಇಬ್ಬರು ಬಾಯ್ ಫ್ರೆಂಡ್ಸ್ ಜೊತೆ ಕುಡಿದು ಕಾರು ಚಲಾಯಿಸಿದ್ದ ಮಹಿಳಾ ಡಾಕ್ಟರ್ ಮಂಜು ಎಂಬಾಕೆಯನ್ನು ಅನುಮಾನದಿಂದ ಪೊಲೀಸರು ತಡೆದು ನಿಲ್ಲಿಸಿದ್ದಾಳೆ.
ಈ ಸಮಯದಲ್ಲಿ ಫುಲ್ ಟೈಟ್ ಆಗಿದ್ದ ಲೇಡಿ ಡಾಕ್ಟರ್ ಬ್ರೀತ್ ಪರೀಕ್ಷೆ ಮಾಡಲು ಬಂದ ಪೊಲೀಸರ ಜೊತೆಯೇ ರಂಪಾಟ ನಡೆಸಿದಳು. ಅಲ್ಲದೆ, ನಡುರಸ್ತೆಯಲ್ಲೇ ಕಾರು ನಿಲ್ಲಿಸಿ ಪರಾರಿಯಾಗಲು ಯತ್ನಿಸಿದಳು. ಆದರೆ, ಕೊನೆಗೂ ಪರೀಕ್ಷೆಯಲ್ಲಿ ಲೇಡಿ ಡಾಕ್ಟರ್ ಮದ್ಯ ಸೇವಿಸಿದ್ದು ದೃಢಪಟ್ಟಿದ್ದು, ಜೂಬ್ಲಿಹಿಲ್ಸ್ ಠಾಣೆಯಲ್ಲಿ ಡಾಕ್ಟರ್ ಮಂಜು ವಿರುದ್ಧ ಕೇಸ್ ದಾಖಲಿಸಿ ದಂಡ ವಸೂಲಿಯನ್ನೂ ಮಾಡಿದ್ದಾರೆ.
