ಬೆಂಗಳೂರು, ಜೂ.3: ನಟಿ ಪ್ರಿಯಾಹಾಸನ್ ರಾಜಕೀಯಕ್ಕೆ ಪ್ರವೇಶ ನೀಡುತ್ತಿದ್ದಾರೆ. ಆಕ್ಷನ್ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ನಟಿ, ನಿರ್ಮಾಪಕಿ, ನಿರ್ದೇಶಕಿಯಾಗಿ ತೊಡಗಿಸಿಕೊಂಡಿ ರುವ ಹಾಸನ ಮೂಲದ ಪ್ರಿಯಾ ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ರಂಗದಲ್ಲೂ ಪ್ರವೇಶ ಪಡೆಯುತ್ತಿದ್ದಾರೆ.
ಕಾಂಗ್ರೆಸ್ನಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು ಈ ಮೊದಲು ಕರವೇ ನಾರಾಯಣಗೌಡರ ಬಣದಲ್ಲೂ ಗುರುತಿಸಿಕೊಂಡಿದ್ದರು. ಬಿಂದಾಸ್ ಹುಡುಗಿ, ಜಂಭದ ಹುಡುಗಿ ಚಿತ್ರಗಳ ಮೂಲಕ ಹೆಸರು ಮಾಡಿರುವ ಇವರ ಮತ್ತೊಂದು ಚಿತ್ರ ಸ್ಮಗ್ಲರ್ ಇನ್ನು ತೆರೆ ಕಾಣಬೇಕಿದೆ. ಆಕ್ಷನ್ ಪಾತ್ರಗಳಲ್ಲಿ ಹೆಚ್ಚು ಆಸಕ್ತರಾಗಿರುವ ಈಕೆ ಅಂತಹ ಪಾತ್ರಗಳನ್ನೇ ಹೆಚ್ಚು ನಿರ್ವಹಿಸಿದವರು
