%VIDEO%
‘ಮಣಿಕಂಠ ಮಹಿಮೆ- ರತಿಕಲ್ಯಾಣ’ ಯಕ್ಷಗಾನ ಪ್ರದರ್ಶನದ ತುಣುಕು
ದುಬೈ, ಮೇ 28: ಯುಎಇಯಲ್ಲಿರುವ ಯಕ್ಷರಸಿಕರು ಕಾತುರದಿಂದ ಕಾಯುತ್ತಿರುವ ದುಬೈ ಯಕ್ಷಮಿತ್ರರ ‘ಮಣಿಕಂಠ ಮಹಿಮೆ- ರತಿಕಲ್ಯಾಣ’ ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆ ಭರದಿಂದ ನಡೆಯುತ್ತಿದೆ.
ಯಕ್ಷಮಿತ್ರರು ದುಬೈ ಇವರ 12ನೆ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಜೂ.12ರಂದು ಸಂಜೆ 5 ಗಂಟೆಗೆ ದುಬೈಯ ಇಂಡಿಯನ್ ಹೈಸ್ಕೂಲ್ನ ಶೇಖ್ ರಾಶಿದ್ ಆಡಿಟೋರಿಯಂನಲ್ಲಿ ಯಕ್ಷಗಾನ ಆಯೋಜಿಸಲಾಗಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ಚೆಂಡೆಯಲ್ಲಿ ಚೈತನ್ಯ ಪದ್ಯಾಣ, ವಿಶೇಷ ವೇಷ ವೈವಿದ್ಯಗಾರರಾಗಿ ಅಕ್ಷಯ್ ಕುಮಾರ್ ಹಾಗೂ ಲಕ್ಷ್ಮಣ ಕುಮಾರ್ ಮರಕಡ, ವೇಷ ಭೂಷಣ ಮತ್ತು ವರ್ಣಾಲಂಕಾರರಾಗಿ ಗಂಗಾಧರ ಡಿ.ಶೆಟ್ಟಿಗಾರ್ ತಮ್ಮ ಕಲಾಪ್ರೌಡಿಮೆಯನ್ನು ಪ್ರದರ್ಶಿಸಲಿದ್ದಾರೆ ಎಂದರು.
