ಮನೋರಂಜನೆ

ಕ್ರಿಕೆಟ್ ಬ್ಯಾಟ್ ಬಡಿದು ಮತ್ತೊಬ್ಬ ವ್ಯಕ್ತಿ ಸಾವು

Pinterest LinkedIn Tumblr

ba

ಕೋಲ್ಕತಾ: ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪೂರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಅಕಸ್ಮಿಕವಾಗಿ ಕ್ರಿಕೆಟ್ ಬ್ಯಾಟ್ ಬಡಿದು ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೋಲ್ಕತಾದಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ಪೂರ್ವ ಮಿಡ್ನಾಪೂರ್ ಜಿಲ್ಲೆಯ ಭಾಗವಾನ್‌ಪುರ್ ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ ಮೃತನಾದ ವ್ಯಕ್ತಿ ಶಶಾಂಕ್ ಮನ್ನಾ, ಸ್ಥಳೀಯ ಬಾಲಕರ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದ ಸಂದರ್ಭದಲ್ಲಿ ಬ್ಯಾಟ್ಸ್‌ಮೆನ್ ಕೈಯಿಂದ ಜಾರಿದ ಬ್ಯಾಟ್ ಆತನ ತಲೆಗೆ ಬಡಿದು ಸಾವನ್ನಪ್ಪಿದ್ದಾನೆ ಎಂದು ತಿಳಿಸಿವೆ.

ಬ್ಯಾಟ್ಸ್‌ಮೆನ್ ಕೈ ತೇವವಾಗಿದ್ದು ಭರ್ಜರಿ ಹೊಡೆತ ಬಾರಿಸಲು ಬಾರಿಸಲು ಹೋದಾಗ, ಆತನ ಕೈಯಿಂದ ಬ್ಯಾಟ್ ಜಾರಿ ನೇರವಾಗಿ ಮೃತನಾದ ಶಶಾಂಕ ತಲೆಗೆ ಬಡಿದಿದೆ. ತೀವ್ರವಾದ ರಕ್ತ ಸ್ರಾವದಿಂದ ಬಳಲುತ್ತಿದ್ದರಿಂದ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕಿಂತ ಮೊದಲು ಕಳೆದ ಏಪ್ರಿಲ್ ತಿಂಗಳಲ್ಲಿ ಅಂಡರ್ -19 ಬಂಗಾಳ ತಂಡದ ಮಾಜಿ ಕ್ರಿಕೆಟಿಗ ಅಂಕಿತ್ ಕೇಸರಿ ಕೂಡಾ ಬ್ಯಾಟ್‌ ಬಡಿದು ಸಾವನ್ನಪ್ಪಿರುವುದನ್ನು ಸ್ಮರಿಸಬಹುದು.

Write A Comment