ಬೆಂಗಳೂರು: ಅಟೆಂಡರ್ ಮಹೇಶ ಪಿಸ್ತೂಲ್ ಗುಂಡಿಗೆ ಬಲಿಯಾಗಿದ್ದ ನಗರದ ಪ್ರಗತಿ ಕಾಲೇಜಿನ ವಿದ್ಯಾರ್ಥಿ ಗೌತಮಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ.
ಪರೀಕ್ಷೆಯಲ್ಲಿ 472(ಶೇ.78.66) ಅಂಕ ಪಡೆಯುವ ಮೂಲಕ ತೇರ್ಗಡೆಯಾಗಿದ್ದಾಳೆ. ಕನ್ನಡ 76, ಇಂಗ್ಲಿಷ್ 88, ಭೌತಶಾಸ್ತ್ರ 62, ರಾಸಾಯನ ಶಾಸ್ತ್ರ 71, ಗಣಿತ 80, ಜೀವಶಾಸ್ತ್ರ 95 ಅಂಕಗಳಿಸಿದ್ದಾಳೆ.
ಮಾರ್ಚ್ 31ರಂದು ರಾತ್ರಿ 10.30ಕ್ಕೆ ಕಾಡುಗೋಡಿ ಠಾಣಾ ವ್ಯಾಪ್ತಿಯ ಪ್ರಗತಿ ರೆಸಿಡೆನ್ಷಿಯಲ್ ಶಾಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಗೌತಮಿ ಹಾಗೂ ಶಿರಿಷಾ ಎಂಬವರ ಮೇಲೆ ಅಟೆಂಡರ್ ಮಹೇಶ್ ಹಾಸ್ಟೆಲ್‍ಗೆ ತೆರಳಿ ಶೂಟ್ ಮಾಡಿದ್ದ. ಈ ಇಬ್ಬರು ವಿದ್ಯಾರ್ಥಿನಿಯರು ತುಮಕೂರು ಜಿಲ್ಲೆ ಪಾವಗಡದವರಾಗಿದ್ದು, ಪ್ರಕರಣದಲ್ಲಿ ಗೌತಮಿ ಸಾವನ್ನಪ್ಪಿದ್ದರೆ, ಶಿರಿಷಾ ಗಾಯಗೊಂಡು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಳು.
