ಕರ್ನಾಟಕ

ಹಾಪ್‌ಕಾಮ್ಸ್‌ನ ಮಾವು-ಹಲಸು ಮೇಳದಲ್ಲಿ ಶೇ. 10ರಷ್ಟು ರಿಯಾಯ್ತಿ

Pinterest LinkedIn Tumblr

Mango-Mele-at-aHopcoms

ಬೆಂಗಳೂರು,ಮೇ 16-ಕಾರ್ಬೈಡ್ ಮುಕ್ತ ಹಣ್ಣು ಸೇವಿಸಬೇಕೆ ಹಾಗಿದ್ದರೆ ಇಂದಿನಿಂದ  ಆರಂಭಗೊಂಡಿರುವ ಹಾಪ್‌ಕಾಮ್ಸ್‌ನ ಶೇ.10ರಷ್ಟು ರಿಯಾಯ್ತಿ ದರದ ಮಾವು ಮತ್ತು ಹಲಸಿನ ಮೇಳಕ್ಕೆ  ಇಂದೇ ಭೇಟಿ ನೀಡಿ.  ಮಾವಿನ ಕಾಯಿಯನ್ನು ಕಾರ್ಬೈಡ್ ಬಳಸಿ ಮಾಡಿದ ಹಣ್ಣು  ಆರೋಗ್ಯದ ದುಷ್ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಹಾಪ್‌ಕಾಮ್ಸ್ ಆರೋಗ್ಯಪೂರ್ಣ ಹಣ್ಣನ್ನು ಗ್ರಾಹಕರಿಗೆ ಒದಗಿಸಲು ಸ್ವತಃ ಮಾವಿನಕಾಯಿಯನ್ನು ರೈತರಿಂದ ಖರೀದಿಸಿ ಇಥೇನ್ ಬಳಸಿ ಹಣ್ಣು ಮಾಡಿ ಮಾರಾಟ ಮಾಡುತ್ತಿದೆ.

ಈ ಹಣ್ಣು ಆರೋಗ್ಯಕ್ಕೂ ಸಹಕಾರಿಯಾಗಿದೆ.  ಗ್ರಾಹಕರು ಮೇಳಕ್ಕೆ ಭೇಟಿ ಕೊಟ್ಟು ಆರೋಗ್ಯಪೂರ್ಣ ಹಾಗೂ ರಸಭರಿತ ಹಣ್ಣುಗಳನ್ನು ಖರೀದಿಸಿ  ಆಸ್ವಾದಿಸುವಂತೆ ಹಾಪ್‌ಕಾಮ್ಸ್ ನ ನಿರ್ದೇಶಕ ಪಳಂಗಪ್ಪ  ತಿಳಿಸಿದರು.

ಇಂದಿನಿಂದ ಆರಂಭವಾಗಿರುವ ಮಾವು ಹಾಗೂ ಹಲಸಿನ ಮೇಳ ಮಾವಿನ ಕಾಲ ಮುಗಿಯುವವರೆಗೂ ನಡೆಯಲಿದೆ. ನಗರದ 250ಕ್ಕೂ ಹೆಚ್ಚು ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮಾರಾಟ ಮೇಳ  ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.  ಗ್ರಾಹಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಾಗೂ ಮೇಳದ ಪ್ರಯುಕ್ತ ಈ ಎಲ್ಲ ಮಳಿಗೆಗಳನ್ನು ಬೆಳಗ್ಗೆ 6.30ಕ್ಕೆ ತೆರೆಯಲಾಗುತ್ತಿದೆ. ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಬೆಂಗಳೂರಿನ ಸುತ್ತಮುತ್ತಲ 5 ಜಿಲ್ಲೆಗಳಿಂದ ಮಾವಿನ ಹಣ್ಣು ಬರುತ್ತದೆ. ಈ ಬಾರಿ ರಾಮನಗರದಿಂದ ಹಣ್ಣು ಬಂದಿದ್ದು, ಕೋಲಾರದಲ್ಲಿ ಇನ್ನು ಫಸಲು ಬಂದಿಲ್ಲ. ಸ್ವಲ್ಪ ತಡವಾಗುತ್ತದೆ ಎಂದರು.  ಬಾದಾಮಿ, ರಸಪುರಿ, ತೋತಪುರಿ ಸೇರಿದಂತೆ 15ಕ್ಕೂ ಹೆಚ್ಚಿನ ಮಾವಿನ ತಳಿಗಳು ನಾಲ್ಕು ರೀತಿಯ ಹಲಸಿನ ಹಣ್ಣನ್ನು ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಹಣ್ಣುಗಳ ದರ ಈ  ಕೆಳಕಂಡಂತಿವೆ.

ಹಣ್ಣು ಗಳು          ರಿಯಾಯ್ತಿ ದರ
ಬಾದಾಮಿ              93 ರೂ.
ರಸಪುರಿ               63 ರೂ.
ಸೆಂದೂರ             36 ರೂ.
ಮಲಗೋವ           83 ರೂ.
ಮಲ್ಲಿಕಾ               81 ರೂ.
ಬೈಗ್ರಾವ್ ಪಲ್ಲಿ        54 ರೂ.
ಕಾಲಾವಾತು          63 ರೂ.
ದಸರಿ                79 ರೂ.
ಕೆಟಲ್               57 ರೂ
ಸಕ್ಕರೆಗುವ           54 ರೂ.

Write A Comment