ತಮ್ಮ ಅಭಿನಯದ ಮೂಲಕ ಸಿನಿಮಾ ಪ್ರಿಯರನ್ನು ಸೆಳೆದಿರುವ ಸೋನಂ ಕಪೂರ್ ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಗಮನಸೆಳೆಯಲು ಮುಂದಾಗಿದ್ದಾರೆ.
ಹೌದು. 1986ರ ಸೆಪ್ಟೆಂಬರ್ 5ರಂದು ಪ್ಯಾನ್ ಆಮ್ವಿಮಾನ ಅಪಹರಣವಾದಾಗ, ಅದರೊಳಗಿದ್ದ ಪ್ರಯಾಣಿಕರನ್ನು ರಕ್ಷಿಸಲಿಕ್ಕಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು, ಗಗನಸಖಿ ನೀರಜಾ ಭಾನೊಟ್ ಅವರ ಜೀವನ ಕರ್ಥೆಯನ್ನು ಆಧರಿಸಿ ಚಿತ್ರವೊಂದು ನಿರ್ಮಾಣವಾಗುತ್ತಿದ್ದು ಈ ಚಿತ್ರದಲ್ಲಿ ಸೋನಂ ಗಗನಸಖಿಯ ಪಾತ್ರದಲ್ಲಿ ಮಿಂಚಲಿದ್ದಾರಂತೆ.
ಸೋನಂ ಗೆ ಈ ವಿಭಿನ್ನ ಪಾತ್ರ ನಿಜವಾಗಿಯೂ ಸಂತಸ ತಂದುಕೊಟ್ಟಿದ್ದು ಅದಕ್ಕಾಗಿಯೇ ಗಗನಸಖಿಯ ಸಮವಸ್ತ್ರದಲ್ಲಿರುವ ತಮ್ಮ ಫಸ್ಟ್ ಲುಕ್ ಅನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದು ಭಾರತದ ಅತಿಚಿಕ್ಕ ವಯಸ್ಸಿನ ಅಶೋಕ ಚಕ್ರ ಪ್ರಶಸ್ತಿ ವಿಜೇತೆಯ ಪಾತ್ರ ನಿಭಾಯಿಸುವ ಸುವರ್ಣಾವಕಾಶ ಸಿಕ್ಕಿದೆ. ಅದೃಷ್ಟ, ಹೆಮ್ಮೆ, ಗೌರವ ಭಾವದಲ್ಲಿದ್ದೇನೆ ಎಂದು ತಮ್ಮ ಮನಸ್ಸಿನ ಖುಷಿಯನ್ನು ಹಂಚಿಕೊಂಡಿದ್ದಾರೆ.
