ಕನ್ನಡ ವಾರ್ತೆಗಳು

ಸರಕಾರಿ ಕಾಲೇಜಿನ ಶೈಕ್ಷಣಿಕ ಪ್ರವಾಸಕ್ಕೆ ತಡೆ : ಕೃತ್ಯ ಖಂಡಿಸಿ ಮುಡಿಪು ಬಂದ್

Pinterest LinkedIn Tumblr

mudipu_attack_photo_1

ಕೊಣಾಜೆ,ಮಾರ್ಚ್.16 : ಶನಿವಾರ ರಾತ್ರಿ ಶೈಕ್ಷಣಿಕ ಪ್ರವಾಸ ಹೊರಟಿದ್ದ ಮುಡಿಪು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಬಸ್ಸನ್ನು ತಡೆದು ಮನೆಗೆ ಕಳುಹಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರ ಕೃತ್ಯ ಖಂಡಿಸಿ ಭಾನುವಾರ ಮುಡಿಪುನಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಯಿತು.  ಮುಡಿಪು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಬೆಂಗಳೂರು ಮತ್ತು ಮೈಸೂರಿಗೆ ಮೂರು ದಿನಗಳ ಶೈಕ್ಷಣಿಕ ಪ್ರವಾಸಕ್ಕೆಂದು ಹೊರಟಿದ್ದರು. ತಂಡದಲ್ಲಿ 14 ವಿದ್ಯಾರ್ಥಿನಿಯರು ಮತ್ತು 24 ವಿದ್ಯಾರ್ಥಿಗಳಿದ್ದರು. ಇದರಲ್ಲಿ ಒಂದು ಸಮುದಾಯದ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಯಾರೂ ಇಲ್ಲ ಎಂಬ ಮಾಹಿತಿ ಪಡೆದಹಿಂದೂ ಸಂಘಟನೆಯ ಕಾರ್ಯಕರ್ತರು ಮುಡಿಪಿನಲ್ಲಿ ಜಮಾಯಿಸಿ ಬಸ್ ಕಾಲೇಜು ಆವರಣ ಬಿಡುತ್ತಿದ್ದಂತೆಯೇ ಮುತ್ತಿಗೆ ಹಾಕಿದ್ದಲ್ಲದೆ ವಿದ್ಯಾರ್ಥಿಗಳನ್ನು ಇಳಿಸಿದರು ಎನ್ನಲಾಗಿದೆ.

ಮಾಹಿತಿ ಪಡೆದ ಕೊಣಾಜೆ ಪೊಲೀಸರು ಸ್ಥಳಾಕ್ಕಾಗಮಿಸಿ ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಿದರು ಮತ್ತು ಪ್ರವಾಸ ರದ್ದುಗೊಳಿಸಿ ವಿದ್ಯಾರ್ಥಿನಿಯರನ್ನು ಸುರಕ್ಷಿತವಾಗಿ ಪೋಷಕರ ಜತೆ ಮನೆಗೆ ಕಳುಹಿಸಿದರೆ, ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಶಾಲೆಯಲ್ಲೇ ವ್ಯವಸ್ಥೆ ಮಾಡಲಾಗಿತ್ತು.

Mudupu_band_photo_7 Mudupu_band_photo_6

ಮಸೀದಿಗೆ ಕಲ್ಲು:
ಪೊಲೀಸರ ಮಧ್ಯ ಪ್ರವೇಶದ ಬಳಿಕ ಎಲ್ಲರೂ ಮನೆಗೆ ತೆರಳಿದ್ದು, ಇದೇ ಸಂದರ್ಭ ದುಷ್ಕರ್ಮಿಗಳ ತಂಡವೊಂದು ಕಾಯರ್‌ಗೋಳಿ ಬಳಿ ಹಾಕಲಾದ ಎಸ್‌ಎಸ್‌ಎಫ್‌ನ ಬ್ಯಾನರ್‌ಗೆ ಹಾನಿ ಮಾಡಿದೆ. ಅಲ್ಲದೇ ಸಾಂಬಾರುತೋಟದ ರಸ್ತೆ ಬದಿಯಲ್ಲಿರುವ ನೂರಾನಿಯ ಮಸೀದಿಗೆ ಕಲ್ಲು ತೂರಾಟವೂ ನಡೆದು ಕಿಟಕಿ ಗಾಜಿಗೆ ಹಾನಿಯಾಗಿದೆ. ಮುಡಿಪಿನಿಂದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಮ್ರಾನ್ ಮತ್ತು ಸವಾದ್ ಎಂ.ಬವರಿಗೆ ತಂಡವೊಂದು ಹಲ್ಲೆ ನಡೆಸಿ ರಿಕ್ಷಾಕ್ಕೆ ಹಾನಿ ಮಾಡಿದೆ.

ಮುಡಿಪು ಬಂದ್ :
ಈ ಘಟನೆ ಖಂಡಿಸಿ ಮುಡಿಪು ನಾಗರಿಕರು ನೀಡಿದ ಕರೆಯಂತೆ ಭಾನುವಾರ ಬಂದ್ ಆಚರಿಸಲಾಯಿತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಮುಡಿಪಿನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

Mudupu_band_photo_3 Mudupu_band_photo_4 Mudupu_band_photo_8

ಉನ್ನತ ಮಟ್ಟದ ಸಭೆ:
ಆರೋಗ್ಯ ಸಚಿವ ಯು.ಟಿ. ಖಾದರ್, ನಗರಾಭಿವೃದ್ಧಿ ಪ್ರಾಕಾರ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಎಸಿಪಿ ಪವನ್ ನೆಚ್ಚೂರು, ಡಿಸಿಪಿ ವಿಷ್ಣುವರ್ಧನ್, ಕೊಣಾಜೆ ಇನ್ಸ್‌ಪೆಕ್ಟರ್ ರಾಘವ ಎಸ್. ಪಡೀಲ್, ಎಸ್‌ಐ ಸುಧಾಕರ್ ಮುಡಿಪಿಗೆ ಆಗಮಿಸಿದ್ದು, ಘಟನೆ ವಿರುದ್ಧ ಪ್ರತಿಭಟನೆಗೆ ಮುಂದಾದ ನೂರಾನಿಯ ಮಸೀದಿಯ ಜಮಾಅತ್ ಸದಸ್ಯರ ನಡುವೆ ಉನ್ನತ ಮಟ್ಟದ ಸಭೆ ನಡೆಸಿದರು. ನೂರಾನಿಯ ಮಸೀದಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಘಟನೆಗೆ ಸಂಬಂಸಿದ ಪ್ರಮುಖ ಆರೋಪಿಗಳನ್ನು ಬಂಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಇಲಾಖೆಯನ್ನು ಜಮಾಅತ್ ಸದಸ್ಯರು ಒತ್ತಾಯಿಸಿದರು. ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಎಸ್‌ವೈಎಸ್ ಸೆಂಟರ್‌ನಿ ಖಂಡನೆ:
ಪ್ರವಾಸಕ್ಕೆ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲದ ನೂರಾನಿ ಮಸೀದಿಗೆ ಕಲ್ಲು ತೂರಾಟ ನಡೆಸಿದ್ದು ಮತ್ತು ಎಸ್ಸೆಸ್ಸೆಫ್ ಬ್ಯಾನರ್‌ಗೆ ಹಾನಿ ಮಾಡಿರುವುದನ್ನು ಎಸ್‌ವೈಎಸ್ ಮುಡಿಪು ಸೆಂಟರ್ ಮತ್ತು ಉಳ್ಳಾಲ ಡಿವಿಷನ್ ಎಸ್‌ಎಸ್‌ಎಫ್ ಖಂಡಿಸಿದೆ.

Mudupu_band_photo_5 Mudupu_band_photo_1 Mudupu_band_photo_2

ನೈಜ ಆರೋಪಿಗೆ ಶಿಕ್ಷೆಯಾಗಬೇಕು:
ಶಾಂತಿ ಹದಗೆಡಿಸಿ ಧರ್ಮ-ಧರ್ಮಗಳ ಮಧ್ಯೆ ಸಂಘರ್ಷಕ್ಕೆ ಆಸ್ಪದ ನೀಡುವ ದುಷ್ಟಶಕ್ತಿಗಳು ಅಲ್ಲಲ್ಲಿ ಈಗ ಬೆಳೆದಿದೆ. ಸಂದರ್ಭ ಬಳಸಿಕೊಂಡು ಮಸೀದಿ, ಧಾರ್ಮಿಕ ಮಂದಿರಗಳಿಗೆ ಹಾನಿ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾಂಬಾರುತೋಟದಲ್ಲಿರುವ ನೂರಾನಿಯ ಮಸೀದಿಗೆ ಕಲ್ಲೆಸೆದು ಹಾನಿ ಮಾಡಿದ ನೈಜ ಆರೋಪಿಗಳನ್ನು ತಕ್ಷಣ ಬಂಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ವದಂತಿಗೆ ಕಿವಿಕೊಡದೆ ಸೌಹಾರ್ದತೆ ಕಾಪಾಡಬೇಕು. ಪೊಲೀಸರು ಕಟ್ಟುನಿಟ್ಟಿನ ನಿಗಾ ಇಡಬೇಕು ಎಂದು ಸಚಿವ ಯು.ಟಿ. ಖಾದರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Write A Comment