ಕನ್ನಡಿಗ ವರ್ಲ್ಡ್, ಜೀವನಶೈಲಿ,ಮಾರ್ಚ್.16 : ದೇಹಕ್ಕೆ ಚೈತನ್ಯ ನೀಡುವ ಪಾನೀಯಗಳು ಅಧಿಕ ರಕ್ತದೊತ್ತಡಕ್ಕೆ ಕಾರಣ ಎಂದು ಅಧ್ಯಯನ ತಂಡವೊಂದು ಸಾಬೀತು ಪಡಿಸಿದೆ. ದೇಹ ದಣಿದಾಗ ಬೇಗನೆ ಉತ್ಸಾಹ ಸಿಗಲು ಯುವ ಜನತೆ ಎನರ್ಜಿ ಡ್ರಿಂಕ್ಸ್‌ಗಳ ಮೊರೆ ಹೋಗುತ್ತಿದ್ದು, ಇದು ಆರೋಗ್ಯಕ್ಕೆ ಉತ್ತಮವಲ್ಲ.19 ಮತ್ತು 40ರ ಹರೆಯದ ನಡುವೆ ಇರುವ 25 ಆರೋಗ್ಯವಂತ ವ್ಯಕ್ತಿಗಳನ್ನು ಅಮೆರಿಕದ ಮಯೋ ಕ್ಲಿನಿಕ್‌ನ ವಿಜ್ಞಾನಿಗಳು ಅಧ್ಯಯನಕ್ಕೊಳಪಡಿಸಿದ್ದರು.
ಈ ರೀತಿಯ ಪಾನೀಯಗಳನ್ನು ಸೇವಿಸುವ ವ್ಯಕ್ತಿಗಳಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಅಧಿಕವಾಗಿರುತ್ತದೆ.ಇಂಥಾ ಪಾನೀಯಗಳನ್ನು ಸೇವಿಸುವ ಮುನ್ನ ಮತ್ತು ಸೇವಿಸಿದ ನಂತರ ಈ ವ್ಯಕ್ತಿಗಳನ್ನು ಆರೋಗ್ಯ ತಪಾಸಣೆಗೊಳಪಡಿಸಿದಾಗ ಇವರ ರಕ್ತದೊತ್ತಡದಲ್ಲಿ ಭಾರೀ ಬದಲಾವಣೆಗಳು ಕಂಡು ಬಂತು ಎಂದು ಅಧ್ಯಯನ ತಂಡ ಹೇಳಿದೆ. ಅಮೆರಿಕದ ಕಾಲೇಜ್ ಆಫ್ ಕಾರ್ಡಿಯಾಲಜಿ ವಾರ್ಷಿಕ ಸಮ್ಮೇಳನದಲ್ಲಿ ಈ ಅಧ್ಯಯನ ವರದಿ ಮಂಡಿಸಲಾಗಿದೆ.