ಬಂಟ್ವಾಳ: ಬಂಟ್ವಾಳ ತಾಲೂಕಿನ ನಾರ್ಶ ಪ್ರೌಢ ಶಾಲೆಯ ಶಿಕ್ಷಕಿಯೊಬ್ಬರು ಸ್ನಾನದ ಕೋಣೆಯೊಳಗಿರುವ ವೇಳೆ ಕೀಡಿಗೇಡಿಗಳು ಮೊಬೈಲ್ ಮೂಲಕ ಚಿತ್ರೀಕರಣಗೊಳ್ಳಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತಾಲೂಕಿನ ಸರಕಾರಿ ನೌಕರರ ಸಂಘ ಹಾಗೂ ವಿವಿಧ ಶಿಕ್ಷಕರ ಸಂಘಟಣೆಗಳು ಕಟುವಾಗಿ ಖಂಡಿಸಿದ್ದು, ಭವಿಷ್ಯದ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸ ಬಾರದು ಹಾಗೂ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ನೌಕರರಿಗೆ ಸೂಕ್ತವಾದ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದೆ.
ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಉಮಾನಾಥ ರೈ ಮತ್ತು ಶಿಕ್ಷಕರ ವಿವಿಧ ಸಂಘಟಣೆಗಳ ಪದಾಧಿಕಾರಿಗಳಾದ ರಮೇಶ್ ಬಾಯಾರ್, ಶಿವಪ್ರಸಾದ್ ಶೆಟ್ಟಿ, ರಾಧಾಕೃಷ್ಣ ಅಡ್ಯಂತಾಯ, ಅವರು ಬುಧವಾರ ಬಿ.ಸಿರೋಡಿನ ಪ್ರಸ್ ಕ್ಲಬ್‌ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕೀಡಿಗೇಡಿಗಳ ಈ ಹೀನ ಕೃತ್ಯವನ್ನು ಖಂಡತುಂಡವಾಗಿ ಖಂಡಿಸಿದರು.
ಈ ಘಟನೆಗೆ ಸಂಬಂಧಿಸಿ ಸಧ್ಯಕ್ಕೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ತಲೆಮರೆಸಿಕೊಂಡಿರುವ ಇನ್ನೊರ್ವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈತನನ್ನು ಕೂಡ ಬಂಧಿಸುವುದರ ಜೊತೆಗೆ ಇದರ ಹಿಂದಿರುವ ಸಂಚನ್ನು ಬಯಲಿಗೆ ಎಳೆಯಬೇಕು. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಸೂಕ್ತವಾದ ಕ್ರಮ ಕೈಗೊಂಡು ಶಿಕ್ಷೆಯಾಗುವ ನಿಟ್ಟಿನಲ್ಲಿ ಪೊಲೀಸರು ಶ್ರಮಿಸಬೇಕೆಂದು ಅವರು ಒತ್ತಾಯಿಸಿದರು.
ಶಿಕ್ಷಕಿಯ ಕೆಲಸದಾಳುವಿನ ಯುವತಿಯ ಮಾನಭಂಗಕ್ಕೂ ಆರೋಪಿಗಳು ಯತ್ನಿಸಿದ್ದಾರೆ.ಪರಿಸರದಲ್ಲಿ ಕೇವಲ ಈ ಒಂದು ಘಟನೆ ಮಾತ್ರವಲ್ಲದೆ ವಿದ್ಯಾರ್ಥಿನಿಯರಿಗೆ, ಒಂಟಿಯಾಗಿ ನಡೆದುಕೊಂಡು ಹೋಗುವ ಯುವತಿಯರಿಗೂ ಚುಡಾಯಿಸುವ ಕೃತ್ಯಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೀಡಿಗೇಡಿಗಳ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು
ಸುದ್ದಿಗೋಷ್ಠಿಯಲ್ಲಿ ರಮೇಶ್ ನಾಯಕ್, ರಘ, ರಾಮಚಂದ್ರ ರಾವ್, ಜೋಯಲ್ ಲೋಬೋ ಉಪಸ್ಥಿತರಿದ್ದರು.
