ಕರ್ನಾಟಕ

ತೊಗಾಡಿಯಾ ನಿರ್ಬಂಧ ತೆರವಿಗೆ ಹೈಕೋರ್ಟ್ ನಕಾರ

Pinterest LinkedIn Tumblr

praveen-togadia

ಬೆಂಗಳೂರು, ಮಾ.11: ಮೈಸೂರಿನಲ್ಲಿ ಇಂದು ನಡೆಯುತ್ತಿರುವ ವಿಶ್ವ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳದಿರಲು ಸರ್ಕಾರ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ಭಾಯ್ ತೊಗಾಡಿಯ ಅವರ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಪ್ರಚೋದನಕಾರಿ ಭಾಷಣದ ಹಿನ್ನೆಲೆಯಲ್ಲಿ ಹಿಂದೂ ಸಮಾಜೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳದಂತೆ ಮೈಸೂರು ಪ್ರವೇಶಕ್ಕೆ ಪ್ರವೀಣ್‌ಬಾಯ್ ತೊಗಾಡಿಯ ಅವರಿಗೆ ಮೈಸೂರು ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಇದನ್ನು ಪ್ರಶ್ನಿಸಿ ತೊಗಾಡಿಯ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರ ಏಕ ಸದಸ್ಯ ಪೀಠ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ. ಹಾಗಾಗಿ ಪ್ರವೀಣ್‌ಭಾಯ್ ತೊಗಾಡಿಯ ಅವರು ಮೈಸೂರಿನಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳುವಂತಿಲ್ಲ. ಬೆಂಗಳೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವದ ಸಂದರ್ಭಕ್ಕೂ ಇವರ ಪ್ರವೇಶಕ್ಕೆ ನಗರ ಪೊಲೀಸ್ ಕಮೀಷನರ್ ನಿರ್ಬಂಧ ಹೇರಿದ್ದರು.

ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಹೈಕೋರ್ಟ್ ಆ ಸಂದರ್ಭದಲ್ಲಿ ಇವರ ಅರ್ಜಿಯನ್ನು ಪುರಷ್ಕರಿಸಿರಲಿಲ್ಲ. ಆಗ ಆಯೋಜಕರು ವೀಡಿಯೋ ಪ್ರದರ್ಶನದ ಮೂಲಕ ತೊಗಾಡಿಯ ಅವರ ಭಾಷಣ ಪ್ರಸಾರ ಮಾಡಿದ್ದರು. ಮೈಸೂರಿನಲ್ಲಿ ವೀಡಿಯೋ ಪ್ರದರ್ಶನವನ್ನು ಸಹ ನಿರ್ಬಂಧಿಸಲಾಗಿದೆ. ಅದಕ್ಕಾಗಿ ಆಯೋಜಕರು ತೊಗಾಡಿಯ ಅವರ ಭಾಷಣವನ್ನು ಬೇರೆಯವರ ಮೂಲಕ ಹೇಳಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

Write A Comment