ರಾಷ್ಟ್ರೀಯ

ರಾಜ್ಯಸಭೆ: ರಾಷ್ಟ್ರಪತಿ ಭಾಷಣಕ್ಕೆ ತಿದ್ದುಪಡಿ ನಿರ್ಣಯ ಅಂಗೀಕಾರ; ಸರ್ಕಾರಕ್ಕೆ ಮುಖಭಂಗ

Pinterest LinkedIn Tumblr

yahoriweb

ನವದೆಹಲಿ: ಸಂಸತ್ತಿನ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಯವರು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯಕ್ಕೆ ಪ್ರತಿ­ಪಕ್ಷಗಳು ಮಂಡಿಸಿದ ತಿದ್ದುಪಡಿಯು ರಾಜ್ಯಸಭೆ­­ಯಲ್ಲಿ ಮಂಗಳವಾರ ಅಂಗೀ­ಕಾ­ರ­ಗೊಂಡು ಸರ್ಕಾರ ಮುಖಭಂಗ ಅನುಭವಿಸಿತು.

‘ರಾಷ್ಟ್ರಪತಿಯವರು ಮಾಡಿದ ಭಾಷ­ಣ­­­ದಲ್ಲಿ ಕಪ್ಪುಹಣ, ಭ್ರಷ್ಟಾ­ಚಾರ ಕುರಿತು ಮಾಡಿದ ಪ್ರಸ್ತಾಪಕ್ಕೆ ತಿದ್ದುಪಡಿ ತರ­ಬೇಕು’ ಎಂಬ ನಿರ್ಣಯ­ವನ್ನು ಸಿಪಿಎಂ ಸದಸ್ಯರಾದ ಸೀತಾರಾಂ ಯೆಚೂರಿ ಮತ್ತು ಪಿ.ರಾಜೀವ್‌ ಮಂಡಿ­ಸಿ­ದರು. ಇದನ್ನು ಮತಕ್ಕೆ ಹಾಕಿದಾಗ ನಿರ್ಣಯಕ್ಕೆ ಗೆಲುವು ಲಭಿ­ಸಿತು. ಈ ಮುನ್ನ ನಿರ್ಣಯವನ್ನು ವಾಪಸ್‌ ತೆಗೆದುಕೊಳ್ಳುವಂತೆ ಸದಸ್ಯ­ರನ್ನು ಮನವೊಲಿಸಲು ಸರ್ಕಾರ ನಡೆ­ಸಿದ ಪ್ರಯತ್ನ ಸಫಲವಾಗಲಿಲ್ಲ.

‘ಕಪ್ಪುಹಣ ವಾಪಸ್‌ ತರುವ ಬಗ್ಗೆ ಹಾಗೂ ಉನ್ನತ ಮಟ್ಟ­ದ­ಲ್ಲಿನ ಭ್ರಷ್ಟಾ­ಚಾ­ರ ನಿರ್ಮೂಲನೆ ಮಾಡಲು ಸರ್ಕಾರ ವಿಫಲ­­ವಾಗಿರುವ ಬಗ್ಗೆ ರಾಷ್ಟ್ರ­ಪತಿ­­ಯವರ ಭಾಷಣದಲ್ಲಿ ಯಾವ ಪ್ರಸ್ತಾಪವೂ ಇಲ್ಲ’ ಎಂಬುದೇ ಸದಸ್ಯರು ಮಂಡಿಸಿದ ತಿದ್ದುಪಡಿಯಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಸೀತಾರಾಂ ಯೆಚೂರಿ ಅವರನ್ನು ನಿರ್ಣಯ ಮಂಡಿಸದಂತೆ ಮನವೊ­ಲಿಸಲು ಯತ್ನಿಸಿದರು. ‘ರಾಷ್ಟ್ರಪತಿ ಅವರ ಭಾಷಣದಲ್ಲಿ ಕಪ್ಪುಹಣದ ಬಗ್ಗೆ ಪ್ರಸ್ತಾಪ ಇದೆ’ ಎಂದು ಹೇಳುವ ಮೂಲಕ ಸಮಾಧಾನಗೊಳಿಸುವ ಯತ್ನ ಮಾಡಿ­ದರು. ಆದರೆ ಯೆಚೂರಿ ಅವರು ಇದನ್ನು ಒಪ್ಪಲಿಲ್ಲ.

‘ನಾನು ಸಾಮಾನ್ಯವಾಗಿ ಇಂತಹ ಮನವಿಗಳನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಚರ್ಚೆ ಆರಂಭವಾಗಿ ೧೪ ಗಂಟೆಗ­ಳಾದರೂ ಪ್ರಧಾನಿಯವರ ಪ್ರತಿಕ್ರಿ­ಯೆಯ ಬಗ್ಗೆ ಸ್ಪಷ್ಟನೆ ಪಡೆಯಲು ಪ್ರತಿ­ಪಕ್ಷಗಳಿಗೆ ಅವಕಾಶ ನೀಡಿಲ್ಲವಾದ್ದರಿಂದ ಅನಿವಾರ್ಯವಾಗಿ ರಾಷ್ಟ್ರಪತಿಯವರ ಭಾಷಣಕ್ಕೆ ತಿದ್ದುಪಡಿ ತರುವಂತೆ ನಿರ್ಣಯ ಮಂಡಿಸಬೇಕಾಯಿತು’ ಎಂದಿದ್ದಾರೆ.
ರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಒಂದು ಗಂಟೆ ಕಾಲ ಈ ಕುರಿತು ಭಾಷಣ ಮಾಡಿ ಸದನದಿಂದ ಹೊರಗೆ ತೆರಳಿದ ಬಗ್ಗೆ ಯೆಚೂರಿ ಆಕ್ಷೇಪ ವ್ಯಕ್ತಪಡಿಸಿದರು. ಪ್ರಸಕ್ತ ಅಧಿವೇಶನದಲ್ಲಿ ಮಹತ್ವದ ಮಸೂದೆಗಳಿಗೆ ಸರ್ಕಾರವು ಅನು­ಮೋದನೆ ಪಡೆಯುವ ಯತ್ನದಲ್ಲಿ­ರುವಾಗ ಸರ್ಕಾರಕ್ಕೆ ಆಗಿರುವ ಈ ಮುಖಭಂಗವು ಆತಂಕ ಮೂಡಿಸಿದೆ.
ನಾಲ್ಕನೇ ಬಾರಿ ಮುಜುಗರ: ರಾಷ್ಟ್ರಪತಿ ಯವರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯಕ್ಕೆ ಪ್ರತಿ­ಪಕ್ಷಗಳು ಸೂಚಿಸಿದ ತಿದ್ದು­ಪಡಿ ಅಂಗೀ­ಕಾರ­ಗೊಂಡಿರು­ವುದು ರಾಜ್ಯಸಭೆಯ ಇತಿಹಾಸ ದಲ್ಲಿ ಇದು ನಾಲ್ಕನೇ ಸಲ­ವಾಗಿದೆ. ಈ ಮುನ್ನ, ೧೯೮೦ರ ಜ.­೩೦ರಂದು ಜನತಾ ಪಕ್ಷ ಆಡಳಿತ­ದಲ್ಲಿದ್ದಾಗ, ೧೯೮೯ರ ಡಿ.೨ ರಂದು ವಿ.ಪಿ.ಸಿಂಗ್‌ ನೇತೃತ್ವದ ರಾಷ್ಟ್ರೀಯ ರಂಗ ಅಧಿಕಾರದಲ್ಲಿದ್ದಾಗ ಹಾಗೂ ೨೦೦೧ರ ಮಾರ್ಚ್‌ ೧೨ರಂದು ಅಟಲ್‌ ಬಿಹಾರಿ ವಾಜ­ಪೇಯಿ ಅವರು ಪ್ರಧಾನಿ­ಯಾಗಿದ್ದಾಗ ಇಂತಹ ತಿದ್ದುಪಡಿ ನಿರ್ಣಯಅನು­ಮೋದನೆಗೊಂಡಿತ್ತು.

Write A Comment