ಮನೋರಂಜನೆ

ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಹಸೀಮ್ ಆಮ್ಲಾ

Pinterest LinkedIn Tumblr

Asim-amlaa

ಕ್ಯಾನ್‌ಬೆರಾ, ಮಾ.3: ಭಾರತ ಕ್ರಿಕೆಟ್‌ನ ಉಪನಾಯಕ ವಿರಾಟ್ ಕೊಹ್ಲಿ ಅವರು ದಾಖಲಿಸಿದ್ದ ವೇಗದ 20ನೆ ಶತಕದ ದಾಖಲೆಯನ್ನು ದಕ್ಷಿಣ ಆಫ್ರಿಕಾದ ಹಸೀಮ್ ಆಮ್ಲಾ ಅವರು ಸರಿಗಟ್ಟಿದ್ದಾರೆ.

ವಿಶ್ವಕಪ್‌ನ ಬಿ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಹಸೀಮ್ ಆಮ್ಲಾ 159 ರನ್‌ಗಳನ್ನು ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿಯು 133 ಏಕದಿನ ಪಂದ್ಯಗಳಲ್ಲಿ 20ನೆ ಶತಕವನ್ನು ದಾಖಲಿಸಿದರೆ ಆಮ್ಲಾ ಕೇವಲ 108 ಪಂದ್ಯಗಳಲ್ಲೇ 20ನೆ ಶತಕವನ್ನು ದಾಖಲಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ಆಮ್ಲಾ ಆಡಿದ 153 ಪಂದ್ಯಗಳ ಪೈಕಿ 111 ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿಯೇ ಕ್ರೀಸ್ ಇಳಿಯುವುದು ಕೂಡ ಗಮನಾರ್ಹ.

ಇನ್ನು ಈ ಹಿಂದೆ 2014ರಲ್ಲಿ ಇದೇ ಆಮ್ಲಾ ಅವರು 17ನೇ ಶತಕ ಸಿಡಿಸಿದಾಗಲೂ ವಿರಾಟ್ ಕೊಹ್ಲಿ ಅವರ ಶತಕ ದಾಖಲೆಯನ್ನು ಹಿಂದಿಕ್ಕಿದ್ದರು. ತ್ವರಿತವಾಗಿ 5000 ರನ್ ಗಳಿಸಿದ ದಾಖಲೆಯಲ್ಲಿಯೂ ಆಮ್ಲಾ ಕೊಹ್ಲಿ ಅವರನ್ನು ಈ ಹಿಂದೆ ಹಿಂದಿಕ್ಕಿದ್ದರು. 5000 ರನ್ ಗಳಿಸಿಲು ಕೊಹ್ಲಿ 114 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಅವರು ಕೂಡ 5 ಸಾವಿರ ರನ್ ಗಳಿಕೆಗಾಗಿ 114 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.

ಅತಿವೇಗದ 20 ಶತಕಗಳನ್ನು ಸಿಡಿಸಿದ ಖ್ಯಾತಿಗೆ ಪಾತ್ರರಾದ ಆಟಗಾರರು ಶತಕ ಸಾಧನೆಗೆ ತೆಗೆದುಕೊಂಡ ಇನ್ನಿಂಗ್ಸ್ ಗಳು
* ಹಶೀಂ ಆಮ್ಲಾ -108
* ವಿರಾಟ್ ಕೊಹ್ಲಿ- 133
* ಎಬಿ ಡಿ ವಿಲೆಯರ್ಸ್-175
* ಸಚಿನ್ ತೆಂಡೂಲ್ಕರ್-197
* ಸೌರವ್ ಗಂಗೂಲಿ-214

Write A Comment