ಮನೋರಂಜನೆ

ಹುಬ್ಬೇರುವಂತೆ ಮಾಡಿದ ಐಶ್ ಫೋಟೊ

Pinterest LinkedIn Tumblr

Aishwarya-Rai

ಮದುವೆಯಾದ ನಂತರ ಮಗುವಾಗಿ ಅದರ ಲಾಲನೆ-ಪಾಲನೆಗೆಂದು, ಬಹುತೇಕ ಎಲ್ಲ ನಟಿಯ ರಂತೆಯೇ ಇಷ್ಟು ವರ್ಷಗಳ ಕಾಲ ಮನೆಯಲ್ಲಿದ್ದ ನಟಿ ಐಶ್ವರ್ಯ ರೈ, ಬಹುಕಾಲದ ಬಳಿಕ ಇದೀಗ ‘ಜಾಸ್ಬಾ’ ಚಿತ್ರದ ಮೂಲಕ ಮತ್ತೆ ತೆರೆಗೆ ಬರುತ್ತಿದ್ದಾಳೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ, ವಿಶ್ವದಲ್ಲೇ ಅತ್ಯಂತ ಸುಂದರ ಹೆಂಗಸು ಎಂಬ ಅಭಿಧಾನಕ್ಕೆ ಪಾತ್ರಳಾಗಿರುವ ಮಾಜಿ ಭುವನ ಸುಂದರಿ, ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯ ರೈ ಅವಳ ಈ ಎರಡನೆ ಇನ್ನಿಂಗ್ಸ್ ತನ್ನ ಸಿನಿಮಾ ಜೀವನದ ‘ಕಂಬ್ಯಾಕ್’ ಎಂದು ಒಪ್ಪೋದಿಲ್ವಂತೆ.

ಛೇ ಛೇ… ಇದು ನನ್ನ ರಿ ಎಂಟ್ರಿ ಅಲ್ಲಾರೀ… ಇಷ್ಟು ದಿನ ನಾನೇ ಬ್ರೇಕ್ ತೆಗೆದುಕೊಂಡಿದ್ದೆ. ಹೆರಿಗೆ ರಜೆ, ಮದುವೆ ರಜೆ ಮೇಲೆ ಹೋಗಿದ್ದೆ. ಈಗ ರಜೆ ಮುಗಿಸಿ ಡ್ಯೂಟಿ ಮೇಲೆ ಬಂದಿದ್ದೇನೆ ಅಷ್ಟೇ ಅಂತಾಳಂತೆ. ಅದೇನೇ ಇರ್ಲಿವ, ಅಭಿಮಾನಿಗಳಿಗಂತೂ ಅವಳ ಕಮ್ ಬ್ಯಾಕ್ ಭಾರೀ ಖುಷಿ ಕೊಟ್ಟಿದೆಯಂತೆ. ಇನ್ನೂ ಒಂದು ವಿಷಯ ಇಲ್ಲಿನ ನಮೂದಿಸಲೇಬೇಕು. ಐಶ್ವರ್ಯಗೆ ಮಗುವಾಗಿ ಸ್ವಲ್ಪ ದಪ್ಪ ಆಗಿದ್ದು, ತೂಕವೂ ಹೆಚ್ಚಿದ್ದರೂ ಇತ್ತೀಚೆಗೆ ನಡೆಸಿರುವ ಫೋಟೋ ಶೂಟ್‌ನಲ್ಲಿ ನಿಜಕ್ಕೂ ಅವಳು ಚಿಕ್ಕ ಹುಡುಗಿಯಂತೆ ಕಂಗೊಳಿಸುತ್ತಿದ್ದಾಳಂತೆ.

Write A Comment