ಮುಂಬೈ

ಬಿ. ಎ. ಸನದಿ ಯವರಿಗೆ ’ಸಾಧನಾ ಶಿಖರ’, ’80ರ ಪಯಣ’ ಬಿಡುಗಡೆ

Pinterest LinkedIn Tumblr

DSC_0123

ಮುಂಬಯಿ : ಕರ್ನಾಟಕ ಸಂಘ ಮುಂಬಯಿಯ ವತಿಯಿಂದ ಡಾ. ಬಿ. ಎ. ಸನದಿಯವರ ’80ರ ಪಯಣ’ ಬಿಡುಗಡೆ ಹಾಗೂ ’ಸಾಧನಾ ಶಿಖರ’ ಪ್ರಶಸ್ತಿ ಪ್ರದಾನ ಸಮಾರಂಭವು ಜ. 31 ರಂದು ಸಂಘದ ಸಮರಸ ಭವನದಲ್ಲಿ ಜರಗಿತು.

ಕೃತಿ ಬಿಡುಗಡೆಗೊಳಿಸಿ ಮಾತನಾಡುತ್ತಾ ಮುಂಬಯಿ ವಿ.ವಿ. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ. ಎನ್. ಉಪಾಧ್ಯ ಅವರು ಸಾಹಿತ್ಯ ಕ್ಷೇತ್ರಕ್ಕೆ ಬಿ. ಎ. ಸನದಿಯವರ ಕೊಡುಗೆ ಬಗ್ಗೆ ಮಾತನಾಡಿದರು. ಕೃತಿ ಪರಿಚಯವನ್ನು ಅಂಕೋಲಾದ ನಿವೃತ್ತ ಪ್ರಾಂಶುಪಾಲ, ಸಾಹಿತಿ ಪ್ರೊ. ಮೋಹನ ಹಬ್ಬು ಮಾಡಿದರು.

DSC_0132

DSC_0131

DSC_0126

ಸಂಘದ ಅಧ್ಯಕ್ಷರಾದ ಪ್ರಕಾಶ್ ಬುರ್ಡೆ ಯವರ ಅಧ್ಯಕ್ಷತೆಯಲ್ಲಿ ಸನದಿಯವರಿಗೆ ’ಸಾಧನಾ ಶಿಖರ’ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿಯು ಶಾಲು, ಪ್ರಶಸ್ತಿ ಪತ್ರ, ಫಲಪುಷ್ಪ ಹಾಗೂ ಹತ್ತು ಸಾವಿರ ರೂ. ನಗದನ್ನು ಹೊಂದಿದ್ದು ಹತ್ತು ಸಾವಿರ ನಗದನ್ನು ಸಂಘದ ಕಟ್ಟಡ ನಿಧಿಗೆ ದೇಣಿಗೆ ನೀಡುದಾಗಿ ತಿಳಿಸಿದರು.

ಡಾ. ಭರತ್ ಕುಮಾರ್ ಪೊಲಿಪು ಕಾರ್ಯಕ್ರಮವನ್ನು ನಿರೂಪಿಸಿದ್ದು ಒಂದಾಸ್ ಕನ್ನಂಗಾರ್ ಸ್ವಾತಿಸಿದರು, ಸಂಘದ ಉಪಾಧ್ಯಕ್ಷ ಶ್ರೀನಿವಾಸ ಜೋಕಟ್ಟೆ, ಅವರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

Write A Comment