ಕನ್ನಡ ವಾರ್ತೆಗಳು

ಸ್ಕೌಟು ಗೈಡು ರಾಲಿಶಿಬಿರ : ಮಂಗಲ್ಪಾಡಿ ಶಾಲಾ ಸ್ಕೌಟು ಗೈಡುಗಳಿಗೆ ಸಮಗ್ರ ಪ್ರಶಸ್ತಿ.

Pinterest LinkedIn Tumblr

scout_gaide_photo

ಮಂಗಳೂರು,ಜ.30 : ಬಾಕ್ರಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪಾತೂರು ಇಲ್ಲಿ ನಡೆದ ಈ ವರ್ಷದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಸ್ಕೌಟು ಗೈಡು ರಾಲಿಶಿಬಿರದಲ್ಲಿ ಮಂಗಲ್ಪಾಡಿ ಹಿರಿಯ ಮಾಧ್ಯಮಿಕ ಶಾಲಾ ಸ್ಕೌಟುಗೈಡುಗಳು ಅತ್ಯಧಿಕ ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿಗೆ ಅರ್ಹತೆ ಪಡೆದರು.

ಬಾಲಕರಿಗಾಗಿ ಸ್ಕೌಟಿಂಗ್ ಪುಸ್ತಕದ ಆಧಾರದಲ್ಲಿ ನಡೆದ ರಸಪ್ರಶ್ನೆ, ವರ್ಣರಂಜಿತ ವೇಷವೈವಿಧ್ಯ ಸ್ಪರ್ಧೆಯಲ್ಲಿ ಪ್ರಥಮ, ಪಟಾಲಂ ಚಟುವಟಿಕೆಗಳಲ್ಲಿ ಪ್ರಥಮ, ಅಡುಗೆಯಲ್ಲಿ ದ್ವಿತೀಯ, ಅಗ್ರಗಾಮಿ ಕೌಶಲದಲ್ಲಿ ದ್ವಿತೀಯ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ವಿಶೇಷ ಸಾಧನೆಗೈಯುವುದರ ಮೂಲಕ ಸಮಗ್ರ ಪ್ರಶಸ್ತಿಗೆ ಅರ್ಹರಾದರು. ಅವರನ್ನು ತರಬೇತುಗೊಳಿಸಿದ ಶಾಲಾ ಗೈಡು ಅಧ್ಯಾಪಿಕೆ ಆಶಾಲತ ಕೆ ಅವರು ಉತ್ತಮ ಗೈಡ್ ಅಧ್ಯಾಪಿಕೆ ಎಂಬ ಪ್ರಶಸ್ತಿಗೆ ಅರ್ಹರಾದರು.

Write A Comment