ಕನ್ನಡ ವಾರ್ತೆಗಳು

ಸತ್ತ ಮಗುವನ್ನು ಗರ್ಭದಲ್ಲೇ ಉಳಿಸಿ ಜೀವಂತ ಮಗು ರಕ್ಷಣೆ!

Pinterest LinkedIn Tumblr

288130-baby

ಬೆಂಗಳೂರು,ಜ.30  : ಸತ್ತು ಹೋದ ಶಿಶುವನ್ನು 14 ವಾರಗಳ ಕಾಲ ಗರ್ಭದಲ್ಲೇ ಉಳಿಸಿ, ಜೀವಂತ ಶಿಶು ರಕ್ಷಣೆ ಮಾಡಿದ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂತಾನೋತ್ಪತ್ತಿ ವೈದ್ಯ ಕ್ಷೇತ್ರದಲ್ಲಿ ಇದೊಂದು ಅಪರೂಪದ ಸಾಧನೆಯಾಗಿದೆ. ಜೀವಂತ ಶಿಶುವನ್ನು ಕಾಪಾಡಲು ತೀರಿಹೋದ ಶಿಶುವನ್ನು ಸತತ 12 ವಾರಗಳ ಕಾಲ ಗರ್ಭದಲ್ಲೇ ಉಳಿಸಿ, ಸಂತಾನ ಹೀನತೆಯಿಂದ ಬಳಲುತ್ತಿದ್ದ ದಂಪತಿಗೆ ಸಂತಾನ ಭಾಗ್ಯ ನೀಡುವಲ್ಲಿ ಬಸವನಗುಡಿಯ ಗುಣಶೀಲ ಫರ್ಟಿಲಿಟಿ ಸೆಂಟರ್‌ನ ವೈದ್ಯರು ಸಫಲರಾಗಿದ್ದಾರೆ.

ಅವಳಿ ಭ್ರೂಣಗಳು ಗರ್ಭಾಶಯದಿಂದ ಹೊರಬರುವ ಮೊದಲು ಒಂದು ಶಿಶು ಮೃತಪಟ್ಟಿತ್ತು. ಗರ್ಭಾಶಯದಲ್ಲಿರುವ ಇನ್ನೊಂದು ಜೀವಂತ ಶಿಶುವನ್ನು ಉಳಿಸಿಕೊಳ್ಳಲು ತೀರಿ ಹೋದ ಶಿಶುವನ್ನು ಹೊರತೆಗೆಯುವುದು ಅಪಾಯಕಾರಿಯಾಗಿತ್ತು. 8 ವರ್ಷಗಳ ಹಿಂದೆ ಮದುವೆಯಾಗಿದ್ದ 32 ವರ್ಷದ ರಾಣಿ(ಹೆಸರು ಬದಲಾಯಿಸಿದೆ) ಮತ್ತು ರಘು ದಂಪತಿಗೆ ಮಕ್ಕಳಾಗಿರಲಿಲ್ಲ, ದಂಪತಿ ಪ್ರಾಥಮಿಕ ಸಂತಾನ ಹೀನತೆಯಿಂದ ಬಳಲುತ್ತಿದ್ದರು. 2011ರಲ್ಲಿ ಫರ್ಟಿಲಿಟಿ ಸೆಂಟರ್‌ಗೆ ಭೇಟಿ ನೀಡಿದ್ದರು.

ಪ್ರಾಥಮಿಕ ಪರೀಕ್ಷೆಯಲ್ಲಿ ರಾಣಿಗೆ ಪಿಸಿಒಎಸ್ ಸಮಸ್ಯೆ ಕಂಡುಬಂದರೆ ಅವರು ಪತಿಯಲ್ಲಿ ವೀರ್ಯಾಣು ಸಮಸ್ಯೆಯಿರುವುದು ಕಂಡು ಬಂದಿತ್ತು.ದಂಪತಿಯನ್ನು ಐವಿಎಂ ಚಿಕಿತ್ಸೆಗೆ ಒಳಪಡಿಸಿ, ರಾಣಿ ಅವರಿಂದ 14 ಅಂಡಾಣುಗಳನ್ನು ಪಡೆಯಲಾಗಿತ್ತು. 8 ಅಂಡಾಣುಗಳನ್ನು ಫಲಿತಗೊಳಿಸಿ, ಅವುಗಳಲ್ಲಿ 2 ಭ್ರೂಣವನ್ನು ರಾಣಿ ಅವರ ಗರ್ಭಾಶಯಕ್ಕೆ 2014ರ ಮೇ 28ರಂದು ವರ್ಗಾಯಿಸಲಾಗಿತ್ತು.
ಇವರಿಗೆ ಗರ್ಭಾವಸ್ಥೆಯ ಎಲ್ಲಾ ಪರೀಕ್ಷೆಗಳನ್ನೂ ನಡೆಸಲಾಯಿತು. ಅವಳಿ ಭ್ರೂಣವಿರುವುದರಿಂದ 14ನೇ ವಾರದಲ್ಲಿ ಫ್ರೋಫಿಲ್ಯಾಕ್ಟಿಕ್ ಶಿರೊಡ್ಕರ್ ಹೊಲಿಗೆ ಹಾಕಲಾಯಿತು. 23ನೇ ವಾರದವರೆಗೆ ಯಾವುದೇ ಆಂತಕಕರ ಘಟನೆಗಳಾಗಿರಲಿಲ್ಲ. ಆದರೆ 24ನೇ ವಾರದಲ್ಲಿ ಒಂದು ಭ್ರೂಣವು ಗರ್ಭಾಶಯದಲ್ಲಿಯೇ ಸತ್ತಿರುವುದು ಕಂಡು ಬಂದಿತ್ತು ಎಂದು ಗುಣಶೀಲ ಫರ್ಟಿಲಿಟಿ ಸೆಂಟರ್‌ನ ತಜ್ಞೆ ಡಾ. ದೇವಿಕಾ ಗುಣಶೀಲ ಹೇಳಿದ್ದಾರೆ.

ಜೀವಂತವಿರುವ ಇನ್ನೊಂದು ಶಿಶುವನ್ನು ಮತ್ತು ತಾಯಿಯನ್ನು ರಕ್ಷಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ಇದೊಂದು ಅಪಾಯಕಾರಿ ಸವಾಲಾಗಿತ್ತು. ತಾಯಿ ರಾಣಿ ಅವರನ್ನು ಹಲವು ಬಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು. ಮತ್ತೆ ಮತ್ತೆ ಸ್ಕ್ಯಾನಿಂಗ್ ಮಾಡುವ ಮೂಲಕ, ಪದೇ ಪದೆ ಹೆಪ್ಪುಗಟ್ಟುವಿಕೆಯನ್ನು ಪ್ರೊಪೈಲ್ ಮಾಡುವ ಮೂಲಕ ಗರ್ಭದ ಸ್ಥಿತಿಯನ್ನು ತಿಳಿಯಲಾಯಿತು.
ಗರ್ಭಾಶಯದಲ್ಲಿಯೇ ಒಂದು ಶಿಶು ಮರಣ ಹೊಂದಿದ ಕಾರಣದಿಂದ 36ನೇ ವಾರದವರೆಗೂ ಸತ್ತ ಶಿಶುವಿನ ಜೊತೆಯೇ ಜೀವಂತವಿರುವ ಶಿಶುವನ್ನು ತುಂಬ ಎಚ್ಚರಿಕೆಯಿಂದ ನೋಡಿಕೊಳ್ಳಲಾಯಿತು ಎಂದು ಅವರು ತಿಳಿಸಿದರು.

ಭಾಗ್ಯಾಗೆ 36ನೇ ವಾರದಲ್ಲಿ ಎಸ್‌ಎಸ್‌ಸಿಎಸ್ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಜನ.22ರಂದು 2.38 ಕೆ.ಜಿ ತೂಕದ ಹೆಣ್ಣು ಮಗುವಿಗೆ ಅವರು ಜನ್ಮ ನೀಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Write A Comment