ಕನ್ನಡ ವಾರ್ತೆಗಳು

ಕುನೀಲ್ ಕಾಂಪ್ಲೇಕ್ಸ್ ದರೋಡೆ ಪ್ರಕರಣದ ಆರೋಪಿಗಳಿಬ್ಬರ ಸೆರೆ

Pinterest LinkedIn Tumblr

splogger-content-theft

ಮಂಗಳೂರು, ಜ.29: ಮೂರು ದಿನಗಳ ಹಿಂದೆ ನಗರದ ಕಾಂಪ್ಲೆಕ್ಸ್ ಒಂದರಲ್ಲಿ ಫಿರೋಸ್ ಅಹ್ಮದ್ ಮತ್ತು ಅವರ ಸ್ನೇಹಿತ ರಾಜೇಶ್ ಎಂಬವರ ಮೇಲೆ ಹಲ್ಲೆ ನಡೆಸಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಫಿರೋಸ್ ಅಹ್ಮದ್ ಮತ್ತು ಅವರ ಸ್ನೇಹಿತ ರಾಜೇಶರನ್ನು ಅಕ್ರಮ ಬಂಧನದಲ್ಲಿರಿಸಿ ಫೀರೋಸ್ ಅಹ್ಮದ್‌ರಲ್ಲಿದ್ದ ಹಣ ಹಾಗೂ ಅವರ ಎಟಿಎಂ ಕಾರ್ಡ್‌ನ್ನು ಬಲವಂತವಾಗಿ ಪಡೆದು ಎಟಿಎಂ ಕಾರ್ಡ್ ಮೂಲಕ ಹಣವನ್ನು ಡ್ರಾ ಮಾಡಿ ಒಟ್ಟು ರೂ. 1,01,000 ನಗದು ಅಪಹರಿಸಿದ್ದರು. ಮಾತ್ರವಲ್ಲದೆ ಪೀರೋಸ್ ಅಹ್ಮದ್‌ರಲ್ಲಿದ್ದ ಚೆಕ್‌ನಲ್ಲಿ ರೂ. 75,000 ನಮೂದಿಸಿ ಅವರಿಂದ ಬಲವಂತವಾಗಿ ಚೆಕ್‌ಗೆ ಸಹಿ ಪಡೆದ ಘಟನೆ ಜ.25ರಂದು ನಡೆದ ಬಗ್ಗೆ ಬಂದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಧ್ಯಾಹ್ನ 3:30 ಗಂಟೆಯಿಂದ ರಾತ್ರಿ 9ಗಂಟೆ ತನಕ ಅಕ್ರಮ ಬಂಧನದಲ್ಲಿರಿಸಿ ದರೋಡೆ ನಡೆಸಿದ್ದು, ಈ ಬಗ್ಗೆ ಫೀರೋಸ್ ಅಹ್ಮದ್ ಮರುದಿನ ದೂರು ದಾಖಲಿಸಿದ್ದರು. ಕೂಡಲೇ ಕಾರ್ಯಾಚರಣೆಗೆ ಇಳಿದ ಸಿಸಿಬಿ ಪೊಲೀಸರು ಬಂದರ್ ಅನ್ಸಾರಿ ರಸ್ತೆ ಕಲ್ಲರಪಿತ್ತಲ್ ಮನೆ ನಿವಾಸಿ ಜುನೈದ್ ಮುಹಮ್ಮದ್ ಯಾನೆ ಜುನೈದ್(22) ಹಾಗೂ ಅನ್ಸಾರಿ ರಸ್ತೆ ಅಝಾರಿಯಾ ಅಪಾರ್ಟ್‌ಮೆಂಟ್ ನಿವಾಸಿ ಮುಹಮ್ಮದ್ ರಫೀಕ್ ಯಾನೆ ಅಪ್ಪಿ(30) ಎಂಬವರನ್ನು ಬಂಧಿಸಿದ್ದಾರೆ.

ಒಟ್ಟು 5 ಮಂದಿ ಸೇರಿ ಈ ಕೃತ್ಯವನ್ನು ನಡೆಸಿರುವುದಾಗಿದೆ. ದಸ್ತಗಿರಿ ಮಾಡಿದ ಆರೋಪಿ ಗಳಿಂದ ರೂ.7,880 ನಗದು ಹಾಗೂ 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಆರೋಪಿಗಳ ಪೈಕಿ ಜುನೈದ್ ಮುಹಮ್ಮದ್ ಎಂಬಾತನ ಮೇಲೆ ಈ ಹಿಂದೆ ಬಂದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮಾತಾಜಿ ಸ್ಯಾನಿಟರಿ ಅಂಗಡಿಯಿಂದ ಕಳವು ಮಾಡಿದ ಪ್ರಕರಣವು ದಾಖಲಾಗಿದೆ.

Write A Comment