ಕನ್ನಡ ವಾರ್ತೆಗಳು

ಲಿಪ್ ಲಾಂಕ್ ದೃಶ್ಯಗಳು ಕಟ್ : ಹನ್ಸಿಕಾ ಮೋಟ್ವಾನಿ

Pinterest LinkedIn Tumblr

haniks_mothkani

ಮುಂಬೈ,ಜ.22 : ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲೂ ಚುಂಬಕ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇನ್ನು ಮುಂದೆ ನಾನು ಲಿಪ್‌ಲಾಕ್(ಚುಂಬಕ) ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹನ್ಸಿಕಾ ಮೋಟ್ವಾನಿ ಹೊಸ ಬಾಂಬ್ ಸಿಡಿಸಿದ್ದಾರೆ.ತುಟಿಗೆ ತುಟಿ ಬೆರೆಸುವುದರಿಂದ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ.

ಲಿಪ್‌ಲಾಕ್ ಮಾಡುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹಾನಿಕಾರಕ ಬ್ಯಾಕ್ಟೀರಿಯಾಗಳು ಹರಡುತ್ತವೆ ಹೀಗಾಗಿ ನಾನು ಚುಂಬಕ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾಳೆ.
ಇಲ್ಲಿಯವರೆಗೂ ಯಾವುದೇ ಲಿಪ್‌ಲಾಕ್ ದೃಶ್ಯಗಳಲ್ಲಿ ಅಭಿನಯಿಸಿಲ್ಲ. ಇನ್ನು ಮುಂದೆಯೂ ಅಭಿನಯಿಸುವುದಿಲ್ಲ. ಅದೇ ರೀತಿ ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ತಣ್ಣೀರು ಎರೆಚಿದ್ದಾಳೆ.

Write A Comment