
ಆನ್ ಆರ್ಬರ್: ಸಾಮಾನ್ಯವಾಗಿ ಹೋಮ್ ಡೆಲಿವರಿ ಮಾಡಿಸಿಕೊಂಡಾಗ ಚಿಲ್ಲರೆ ಕಾಸು ಟಿಪ್ಸ್ ರೂಪದಲ್ಲಿ ಕೋಡೋದನ್ನು ನೋಡಿದ್ದೀರಿ. ಆದರೆ ಇಲ್ಲೊಬ್ಬ ಒಂದು ಪಿಜ್ಜಾ ಡೆಲಿವರಿ ಮಾಡಿದ್ದಕ್ಕಾಗಿ 1,27,124 ರೂ. ಟಿಪ್ಸ್ ಪಡೆದಿದ್ದಾನೆ.
ಅಮೆರಿಕಾದ ಮಿಷಿಗನ್ನ ಆನ್ ಆರ್ಬರ್ನಲ್ಲಿ ರಿಯಲ್ ಎಸ್ಟೇಟ್ ಏಜೆಂಟರು ಪಿಜ್ಜಾ ಆರ್ಡರ್ ಮಾಡಿದ್ದರು. ಇದನ್ನು ತೆಗೆದುಕೊಂಡು ಬಂದ ರಾಬ್ ಎಂಬಾತನಿಗೆ ಏಜೆಂಟರು ಒಟ್ಟಾತೆ ಒಂದೂ ಕಾಲು ಲಕ್ಷ ರೂಪಾಯಿ ಟಿಪ್ಸ್ ನೀಡಿದ್ದಾನೆ.
ಕೆಲ್ಲೆರ್ ವಿಲಿಯಮ್ಸ್ ರಿಯಾಲ್ಟಿ ಕಂಪೆನಿಯ ಪ್ರಾದೇಶಿಕ ಸಮ್ಮೇಳನದ ವೇಳೆ ಈ ಆರ್ಡರ್ ಮಾಡಲಾಗಿತ್ತು. ಸೇವಾ ವಲಯದಲ್ಲಿರುವವರಿಗೆ ಉತ್ತೇಜನ ನೀಡಬೇಕೆನ್ನುವುದು ನಮ್ಮ ಉದ್ದೇಶವಾಗಿತ್ತು. ಇದಕ್ಕಾಗಿ ನಾವು ಈ ಗಿಫ್ಟ್ ನೀಡಿದ್ದೇವೆ ಎಂದು ಸ್ಟ್ಯಾಸಿ ಮ್ಯಾಕ್ವೇ ಹೇಳಿದ್ದಾರೆ.
ಟಿಪ್ಸ್ ಜೊತೆಗೆ ರಾಬ್ಗೆ ವೀಸಾ ಗಿಫ್ಟ್ ಕಾರ್ಡ್, ಲಾಟರಿ ಟಿಕೆಟ್ ಕೂಡಾ ಕೊಡುಗೆಯಾಗಿ ಸಿಕ್ಕಿದೆ. ಆದರೆ ಟಿಪ್ಸ್ ಸ್ವೀಕರಿಸಿದ ರಾಬ್ಗೆ ಇನ್ನೂ ಅಚ್ಚರಿ ಮುಗಿದಿಲ್ಲ. ಆತ ಹೇಳೋದೊಂದೇ ಮಾತು. ‘ನಾನು ಕೇವಲ ಪಿಜ್ಜಾ ಡೆಲಿವರಿ ಮಾಡಿದ್ದೇನೆ ಅಷ್ಟೇ..!!’