ಕನ್ನಡ ವಾರ್ತೆಗಳು

ಗಂಗೆಯಲ್ಲಿ ತೇಲಿದ ನೂರಾರು ಕೊಳೆತ ಶವಗಳು – ಸಾಮೂಹಿಕ ಅಂತ್ಯಕ್ರಿಯೆ ಮತ್ತು ತನಿಖೆಗೆ ಸೌಮ್ಯ ಅಗರವಾಲ್ ಆದೇಶ

Pinterest LinkedIn Tumblr

Ganges_dead_body_2

 

ಲಕ್ನೋ, ಜ.14: ಗಂಗಾ ನದಿ ಸ್ವಚ್ಛಗೊಳಿಸಲು ಪತ್ಯೇಕ ಸಚಿವರನ್ನು ನೇಮಿಸಿದ ಮೋದಿ ಸರ್ಕಾರಕ್ಕೆ ಆಘಾತಕಾರಿ ಸುದ್ದಿ ಬಂದಿದೆ. ಉತ್ತರ ಪ್ರದೇಶದ ಕಾನ್ಪುರ ಉನ್ನಾವೊ ಜಿಲ್ಲೆಗಳ ನಡುವಿನ ಪ್ರದೇಶದ ಪರಿಯಾರ್ ಬಳಿ ಗಂಗಾನದಿಯಲ್ಲಿ ಅರೆಬರೆ ಕೊಳೆತ ಸ್ಥಿತಿಯಲ್ಲಿರುವ ನೂರಕ್ಕೂ ಹೆಚ್ಚು ಮೃತ ದೇಹಗಳು ತೇಲುತ್ತಿರುವ ದೃಶ್ಯ ಕಂಡು ಬಂದಿದೆ. ಬುಧವಾರ ಸಫಿಯಾರ್ ಪ್ರದೇಶದಲ್ಲಿ ಬುಧವಾರ ನಗರ ಪಾಲಿಕೆಯವರು 50 ಹೆಣ ಎತ್ತಿ ಇನ್ನು ನಮ್ಮ ಕೈಲಿಯಲ್ಲಿ ಆಗುವುದಿಲ್ಲ ಎಂದಿದ್ದಾರೆ.

Ganges_dead_body_3

ಮೋಕ್ಷ ಪ್ರಾಪ್ತಿಗಾಗಿ ಈ ಮೃತ ದೇಹಗಳನ್ನು ನದಿಯ ಮಧ್ಯ ಭಾಗಕ್ಕೆ ತೆಗೆದುಕೊಂಡು ಹೋಗಿ ಮುಳುಗಿಸುವುದು ಬಹುಕಾಲದಿಂದ ನಡೆದುಕೊಂಡು ಬಂದಿದೆ. ಇಂಥ ಹೆಣಗಳೇ ಇಲ್ಲಿ ತೇಲುತ್ತಿರಬಹುದು ಎಂದು ಜಿಲ್ಲಾಡಳಿತ ಅಭಿಪ್ರಾಯಪಟ್ಟಿದೆ. ಅದರೆ, ನಾಗರಿಕರ ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿ ಸೌಮ್ಯ ಅಗರವಾಲ್ ಅವರು ತನಿಖೆಗೆ ಆದೇಶಿಸಿದ್ದಾರೆ.ಕಾನ್ಪುರ-ಉನ್ನಾವೊ ಜಿಲ್ಲಾಡಳಿತಗಳು, ಮೃತ ದೇಹಗಳ ಸಾಮೂಹಿಕ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುತ್ತಿವೆ. ಉಭಯ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಇತರ ಹಿರಿಯ ಅಧಿಕಾರಿಗಳು ನದಿ ತೀರದಲ್ಲಿ ಬೀಡುಬಿಟ್ಟಿದ್ದಾರೆ. ಸಂಪೂರ್ಣವಾಗಿ ಕೊಳೆತಿರುವ ಹೆಣಗಳ ಶವಪರೀಕ್ಷೆ ಸಾಧ್ಯವಿಲ್ಲದ ಕಾರಣ, ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಡಿಎನ್ ಎ ಪರೀಕ್ಷೆಗೆ ಕಳಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಗೀತಾ ಯಾದವ್ ಹೇಳಿದ್ದಾರೆ.

Ganges_dead_body_1

ಎನ್ ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಗಂಗಾ ನದಿ ಶುದ್ಧೀಕರಣ ಯೋಜನೆ ಹಿಂದೆ ಬಿದ್ದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿತ್ತು. ಇದಕ್ಕೂ ಮುನ್ನ ಮೊದಲ ಹಂತದಲ್ಲಿ ಪವಿತ್ರ ನದಿಯ ತೀರದಲ್ಲಿರುವ 118 ನಗರ, ಪಟ್ಟಣಗಳನ್ನು ಗುರುತಿಸಲಾಗಿದ್ದು ಒಳಚರಂಡಿ ನಿರ್ಮಾಣನ ಸ್ವಚ್ಛತೆಗೆ ಆದ್ಯತೆ ಮುಂತಾದ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ನೀಲನಕ್ಷೆ ಪ್ರಕಟಿಸಿತ್ತು.

Write A Comment